Back to Top

‘ನವಗ್ರಹ’ ಮರುಬಿಡುಗಡೆ ದರ್ಶನ್ ಅಭಿಮಾನಿಗಳಿಗೆ ಚಿತ್ರಮಂದಿರ ಮಾಲೀಕರ ಎಚ್ಚರಿಕೆ

SSTV Profile Logo SStv November 7, 2024
ಚಿತ್ರಮಂದಿರ ಮಾಲೀಕರ ಎಚ್ಚರಿಕೆ
ಚಿತ್ರಮಂದಿರ ಮಾಲೀಕರ ಎಚ್ಚರಿಕೆ
‘ನವಗ್ರಹ’ ಮರುಬಿಡುಗಡೆ ದರ್ಶನ್ ಅಭಿಮಾನಿಗಳಿಗೆ ಚಿತ್ರಮಂದಿರ ಮಾಲೀಕರ ಎಚ್ಚರಿಕೆ ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ ನವೆಂಬರ್ 8 ರಂದು ಮರುಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರ ಮಾಲೀಕರು ದರ್ಶನ್ ಅಭಿಮಾನಿಗಳಿಗೆ ಶಿಸ್ತಿನಿಂದ ವರ್ತಿಸಲು ಎಚ್ಚರಿಕೆ ನೀಡಿದ್ದಾರೆ. ‘ಕರಿಯ’ ಮರುಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳ ಅತಿರೇಕದ ವರ್ತನೆ ಮತ್ತು ಘಟನೆಗಳನ್ನು ಮರುಕಳಿಸದಂತೆ ಎಚ್ಚರಿಕೆ ಫಲಕವನ್ನು ಅಳವಡಿಸಿ, ಘೋಷಣೆಗಳು, ದಿಕ್ಕಾರಗಳು, ಅಥವಾ ಅಸಭ್ಯ ವರ್ತನೆಗಳಿಂದ ದೂರವಿರಲು ಸೂಚನೆ ನೀಡಲಾಗಿದೆ. ಕೆಲ ತಿಂಗಳ ಹಿಂದೆ ‘ಕರಿಯ’ ಸಿನಿಮಾ ಪ್ರದರ್ಶನ ಸಂದರ್ಭದಲ್ಲಿ ನಡೆದ ಅತಿರೇಕದ ಘಟನೆಗಳಿಂದ ಪೊಲೀಸರು ಶೋ ರದ್ದುಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಈ ಬಾರಿ ಮುಂಜಾಗ್ರತಾ ಕ್ರಮವಾಗಿ, ಚಿತ್ರಮಂದಿರದ ಆಡಳಿತ ಈ ರೀತಿಯ ಸಮಸ್ಯೆಗಳನ್ನು ತಪ್ಪಿಸಲು ಕಟ್ಟು ನಿಟ್ಟಿನ ನಿಯಮಗಳನ್ನು ಅಳವಡಿಸಿದೆ.