"ಜಾಮೀನಿನ ಟೆನ್ಷನ್ ನಡುವೆ ದರ್ಶನ್ ‘ದೈವದ ದರ್ಶನ’ಕ್ಕೆ ಕಾಲಿಟ್ಟದ್ದು ಯಾಕೆ?"


ಸ್ಯಾಂಡಲ್‌ವುಡ್ ನಟ ದರ್ಶನ್ ಇಂದು ಮೈಸೂರಿನ ಪವಿತ್ರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ, ಫೋಟೋ ತೆಗೆದು, ಶುಭಾಶಯ ಕೋರಿದರು.
ಇದು ದರ್ಶನ್ ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರದ ಮೊದಲ ಸಾರ್ವಜನಿಕ ಭೇಟಿ ಆಗಿದ್ದು, ಅವರು ದೇವರ ದರ್ಶನ ಪಡೆದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅದರ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.
ಇದಕ್ಕೂ ಮುನ್ನ ದರ್ಶನ್ ಹಾಗೂ ಪವಿತ್ರಾ ಗೌಡ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದುಪಡಿಸಲು ಅರ್ಜಿ ಸಲ್ಲಿಸಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆದಿದೆ. ದರ್ಶನ್‌ನ ಈ ದೇವಾಲಯ ಭೇಟಿ ಇದೀಗ ಸಾಕಷ್ಟು ಚರ್ಚೆ ಮೂಡಿಸಿದೆ.