ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ತೀವ್ರ ಬೆನ್ನುನೋವಿಗೆ ಚಿಕಿತ್ಸೆ ಫಿಸಿಯೋಥೆರಪಿ ಮೊದಲ ಹೆಜ್ಜೆ


ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ತೀವ್ರ ಬೆನ್ನುನೋವಿಗೆ ಚಿಕಿತ್ಸೆ ಫಿಸಿಯೋಥೆರಪಿ ಮೊದಲ ಹೆಜ್ಜೆ ನಟ ದರ್ಶನ್ ಅವರ ತೀವ್ರ ಬೆನ್ನುನೋವು ಹಿನ್ನೆಲೆ, ಇಂದು ಮಧ್ಯಾಹ್ನದ ನಂತರ ಬಿಜಿಎಸ್ ಆಸ್ಪತ್ರೆಯಲ್ಲಿ ಹಲವು ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ. ECG, ಸ್ಕ್ಯಾನಿಂಗ್, ಬಿಪಿ, ಶುಗರ್, ರಕ್ತ ಪರೀಕ್ಷೆ ಹಾಗೂ ಲಿವರ್ ಫಂಕ್ಷನ್ ಟೆಸ್ಟ್ (LFT) ಸೇರಿದಂತೆ ಸಂಪೂರ್ಣ ಆರೋಗ್ಯ ಪರೀಕ್ಷೆ ಮಾಡಲಾಗುತ್ತದೆ.
ದರ್ಶನ್ ಕುಟುಂಬವು ಪ್ರಾಥಮಿಕವಾಗಿ ಫಿಸಿಯೋಥೆರಪಿ ಮತ್ತು ಔಷಧಿ ಮೂಲಕಲೇ ನೋವನ್ನು ಕಡಿಮೆ ಮಾಡಲು ಆಶಿಸುತ್ತಿದ್ದು, ಅಗತ್ಯವಿದ್ದರೆ ಮಾತ್ರ ಸರ್ಜರಿ ಮಾಡಿಸೋದು ಅಂತಿಮ ಆಯ್ಕೆ ಎಂದು ತಿಳಿಸಿದೆ.