ಬಳ್ಳಾರಿ ಜೈಲಿನಲ್ಲಿ ಸಂಭ್ರಮ ನಟ ದರ್ಶನ್‌ಗೆ ಮಧ್ಯಂತರ ಜಾಮೀನು


ಬಳ್ಳಾರಿ ಜೈಲಿನಲ್ಲಿ ಸಂಭ್ರಮ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್‌ಗೆ 6 ವಾರಗಳ ಮಧ್ಯಂತರ ಜಾಮೀನು ಸಿಕ್ಕಿದ್ದು, ಈ ಸುದ್ದಿ ಬಳ್ಳಾರಿ ಸೆಂಟ್ರಲ್ ಜೈಲು ಮುಂಭಾಗದಲ್ಲಿ ನೂರಾರು ಅಭಿಮಾನಿಗಳನ್ನು ಎಳೆದೊಯ್ದಿದೆ. ದರ್ಶನ್ ಅವರನ್ನು ಬೇಟಿಯಾಗಲು ಪತ್ನಿ ವಿಜಯಲಕ್ಷ್ಮಿ, ಪುತ್ರ ಸುಶಾಂತ್ ನಾಯ್ಡು, ಹಾಗೂ ಕುಟುಂಬದ ಆಪ್ತರು ಜೈಲಿಗೆ ಆಗಮಿಸಿದ್ದು, ಜಾಮೀನು ವಿಚಾರವನ್ನು ದರ್ಶನ್‌ಗೆ ಮಾಹಿತಿ ನೀಡಿದ್ದಾರೆ.
ಅಭಿಮಾನಿಗಳ ಸಂಭ್ರಮವನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಜೈಲು ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪೊಲೀಸರು ಸಾರ್ವಜನಿಕರನ್ನು ಜೈಲು ಬಳಿಯಿಂದ ದೂರ ಸಾಗಲು ಸೂಚಿಸುತ್ತಿದ್ದು, ದರ್ಶನ್ ಶೀಘ್ರದಲ್ಲೇ ಹೈ ಸೆಕ್ಯುರಿಟಿ ಸೆಲ್‌ನಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ.