ಅರ್ಜುನ್ ಗುರೂಜಿ ಆಶೀರ್ವಾದ ಪಡೆದ 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರತಂಡ ಅಭಿಮನ್ಯು ಕಾಶೀನಾಥ್ ಅಭಿನಯದ 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಖುಷಿಯ ಸಂದರ್ಭದಲ್ಲಿ ಅಭಿಮನ್ಯು ಮತ್ತು ಚಿತ್ರತಂಡ ಮೈಸೂರಿನ ಅವಧೂತ ಅರ್ಜುನ್ ಗುರೂಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಗುರೂಜಿ ಚಿತ್ರತಂಡಕ್ಕೆ ಒಳಿತಾಗಲಿ, ಚಿತ್ರವು ಯಶಸ್ವಿಯಾಗಿ ಹೆಚ್ಚು ಜನರಿಗೆ ತಲುಪಲಿ ಎಂದು ಹಾರೈಸಿದ್ದಾರೆ.
ಅಭಿಮನ್ಯು, ತಾವು ತಂದೆ ಕಾಶೀನಾಥ್ ಅವರ ನೆನಪಿಗೆ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ನಾಯಕ ನಟನಾಗಿ ಅಭಿಮನ್ಯು ಕಾಶೀನಾಥ್ ಮತ್ತು ನಾಯಕಿಯಾಗಿ ಸ್ಫೂರ್ತಿ ಉಡಿಮನೆ ನಟಿಸಿದ್ದು, ಕಥೆ-ಚಿತ್ರಕಥೆ-ಸಂಭಾಷಣೆ ಸಂಯೋಜನೆಗೆ ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಪ್ರಣವ್ ರಾವ್ ಸಂಗೀತ, ಸತ್ಯ ರಾಮ್ ಛಾಯಾಗ್ರಹಣ, ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕೆ ವಿಶೇಷ ಆಕರ್ಷಣೆಯಾಗಿದೆ.