ಅಪ್ಪು, ಯಶ್, ಶಿವಣ್ಣನ ಜೊತೆ ಮಾಡಿದ ಕೊನೆಯ ಡ್ಯಾನ್ಸ್ ಅಭಿಮಾನಿಗಳ ಕಣ್ಣೀರು ತರಿಸುವ ದೃಷ್ಯ


ಅಪ್ಪು, ಯಶ್, ಶಿವಣ್ಣನ ಜೊತೆ ಮಾಡಿದ ಕೊನೆಯ ಡ್ಯಾನ್ಸ್ ಅಭಿಮಾನಿಗಳ ಕಣ್ಣೀರು ತರಿಸುವ ದೃಷ್ಯ ಅಕ್ಟೋಬರ್ 29, ಕರುನಾಡ ‘ಕಿರುನಗೆ’ ಕಣ್ಮರೆಯಾದ ದಿನ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೃದಯ ಬಡಿತ ನಿಂತು ಹೋದ ದಿನ. ಕೋಟಿ ಕೋಟಿ ಅಭಿಮಾನಿಗಳ ಪಾಲಿಗಿದು ಕರಾಳ ದಿನವೇ ಆಗಿದೆ. ಸ್ಯಾಂಡಲ್ವುಡ್ ಪ್ರೀತಿಯ ಅಪ್ಪುವನ್ನು ಕಳೆದುಕೊಂಡು ಮೂರು ವರ್ಷ ಕಳೆದಿದೆ. ಇಂದಿಗೂ ರಾಜ್ ಪುತ್ರ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದ್ದಾರೆ. ಪುನೀತ್ ನಿಧನಕ್ಕೂ ಮುನ್ನ ಶಿವಣ್ಣನ ಸಿನಿಮಾ ಪ್ರಮೋಷನ್ ವೇಳೆ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ರು.
ಅದೇ ಪುನೀತ್ ಅವರ ಕೊನೆಯ ಡ್ಯಾನ್ಸ್ ಆಗಿದ್ದು, ಈ ದಿನವೇನೋ ವಿಶೇಷವಾಗಿ ಅಭಿಮಾನಿಗಳಿಗೆ ನೆನಪಾಯಿತು. ವಿಡಿಯೋದಲ್ಲಿ ಅಪ್ಪು, ಶಿವಣ್ಣ ಹಾಗೂ ಯಶ್ ಜೊತೆ ಸಂತೋಷದಿಂದ ಕುಣಿದಾಡಿದ ಕ್ಷಣಗಳು ಈಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ತಮ್ಮ ಸ್ಪೂರ್ತಿದಾಯಕ ನಡೆ-ನುಡಿಗಳಿಂದ ಜನರ ಮನದಲ್ಲಿ ನೆಲೆಸಿರುವ ಅಪ್ಪು, ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಪ್ರತಿಯೊಬ್ಬರಿಗೂ ಹತ್ತಿರದವರು.
"ನಿಮ್ಮ ಡ್ಯಾನ್ಸ್ ನೋಡಲು ಥಿಯೇಟರ್ ಹೋಗಿದ್ದ ದಿನಗಳು ನೆನಪಾಗ್ತಿವೆ," "ವಾಪಸ್ ಬನ್ನಿ ಅಪ್ಪು," ಎಂದು ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದು, ಪುನೀತ್ ಅವರನ್ನು ಕಳೆದುಕೊಂಡ ನೋವು ಮತ್ತೆ ಮನಸ್ಸಿನಲ್ಲಿ ತಾಜಾ ಮಾಡಿದೆ.