ಪತ್ನಿ-ಮಗಳೇ ಅಜಯ್ ರಾವ್ ವಿರುದ್ಧ ದೂರು! ವಿಚ್ಛೇದನಕ್ಕೆ ಮುಂದಾದ ದಂಪತಿ


ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಮ್ಯಾಂಕಿಂಗ್ ಮಾಡಿಕೊಂಡಿರುವ ನಟ ಅಜಯ್ ರಾವ್ ಇದೀಗ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಮದುವೆಯಾಗಿ 11 ವರ್ಷ ಕಳೆದ ಬಳಿಕ, ಅಜಯ್ ರಾವ್ ಮತ್ತು ಅವರ ಪತ್ನಿ ಸ್ವಪ್ನಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಜಯ್ ರಾವ್ ಮತ್ತು ಸ್ವಪ್ನಾ ಅವರು 2014ರಲ್ಲಿ ಹೊಸಪೇಟೆಯಲ್ಲಿ ಆಪ್ತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ಈ ದಂಪತಿಗೆ ಮಗಳು ಚರಿಷ್ಮಾ ಇದ್ದಾಳೆ. ಪ್ರೀತಿಸಿ ಮದುವೆಯಾದ ಈ ಜೋಡಿ ಇದೀಗ ಬೇರಾಗಲು ನಿರ್ಧರಿಸಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಮದುವೆಯಲ್ಲಿ ಬಿರುಕು ಮೂಡಲು ನಿಖರ ಕಾರಣಗಳ ಬಗ್ಗೆ ಇನ್ನಷ್ಟೇ ಮಾಹಿತಿ ಬಹಿರಂಗವಾಗಬೇಕಿದೆ. ಆದರೆ, ಅಜಯ್ ರಾವ್ ವಿರುದ್ಧ ಪತ್ನಿ ಸ್ವಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿರುವ ಸುದ್ದಿ ಹೊರಬಿದ್ದಿದೆ. ಅಷ್ಟೇ ಅಲ್ಲದೆ, ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಬೆಳಕಿಗೆ ಬಂದಿಲ್ಲ. ಆದರೆ, ಅಜಯ್ ರಾವ್ ಅವರ ವೈಯಕ್ತಿಕ ಜೀವನದಲ್ಲಿ ಬಿರುಕು ಮೂಡಿರುವುದು ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿಯಿಂದ ಆರಂಭವಾದ ಸಂಬಂಧ ಇದೀಗ ವಿಚ್ಛೇದನ ಹಂತಕ್ಕೆ ತಲುಪಿರುವುದು ಅಭಿಮಾನಿಗಳ ಮನಸ್ಸಿಗೆ ನೋವುಂಟುಮಾಡಿದೆ.
ಅಜಯ್ ರಾವ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ರೊಮ್ಯಾಂಟಿಕ್ ಹೀರೋ ಇಮೇಜ್‌ನಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಆದರೆ, ಅವರ ವೈಯಕ್ತಿಕ ಜೀವನದಲ್ಲಿ ನಡೆದಿರುವ ಈ ಬೆಳವಣಿಗೆಗಳು ಅಭಿಮಾನಿಗಳನ್ನು ದುಃಖಿತಗೊಳಿಸಿರುವುದು ಖಚಿತ. ಮುಂದೆ ಈ ಪ್ರಕರಣ ಹೇಗೆ ಸಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಅಜಯ್ ರಾವ್ ದಾಂಪತ್ಯ ಬಿರುಕು ಇದು ಕೇವಲ ಗಾಸಿಪ್ಪಾ, ಅಥವಾ ನಿಜವಾಗಿಯೂ ದಾಂಪತ್ಯ ಮುರಿಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಬಾಕಿಯೇ ಇದೆ.