52ನೇ ವಸಂತಕ್ಕೆ ಕಾಲಿಟ್ಟ ಬಾದ್ ಷಾ ಕಿಚ್ಚ ಸುದೀಪ್ – ಮಧ್ಯರಾತ್ರಿ ಅಭಿಮಾನಿಗಳ ಜೊತೆ ಅದ್ಧೂರಿ ಸಂಭ್ರಮ


ಕನ್ನಡ ಸಿನಿರಂಗದ ಬಾದ್ ಷಾ ಕಿಚ್ಚ ಸುದೀಪ್ ತಮ್ಮ 52ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ. ಸೆಪ್ಟೆಂಬರ್ 2ರಂದು 52ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್, ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ ನಲ್ಲಿ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು. ರಾತ್ರಿ ಹನ್ನೆರಡು ಗಂಟೆ ಹೊತ್ತಿಗೆ ಕೇಕ್ ಕತ್ತರಿಸಿ, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಅಭಿಮಾನಿಗಳೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡರು. ಅಭಿಮಾನಿಗಳ ಘೋಷಣೆಗಳು ಮುಗಿಲುಮುಟ್ಟಿದಂತೆಯೇ, ಆ ಸ್ಥಳವೇ ಹಬ್ಬದ ವಾತಾವರಣ ಪಡೆದುಕೊಂಡಿತ್ತು.
ಈ ಬಾರಿಯ ಹುಟ್ಟುಹಬ್ಬದಲ್ಲಿ ಸುದೀಪ್ ತಮ್ಮ ಅಭಿಮಾನಿಗಳಿಗೆ ‘ಮಾರ್ಕ್’ ಚಿತ್ರದ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಸರ್ಪ್ರೈಸ್ ಕೊಟ್ಟರು. ಬಿಗ್ ಸ್ಕ್ರೀನ್‌ನಲ್ಲಿ ಪ್ರದರ್ಶನಗೊಂಡ ಈ ಟೀಸರ್ ಅಭಿಮಾನಿಗಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು.
ಒತ್ತಡದ ಕೆಲಸಗಳಿದ್ದರೂ, ಸುದೀಪ್ ಅಭಿಮಾನಿಗಳ ನಿರೀಕ್ಷೆ ವ್ಯರ್ಥಗೊಳಿಸದೆ ಹುಟ್ಟುಹಬ್ಬವನ್ನು ಅವರ ಜೊತೆ ಆಚರಿಸಿಕೊಂಡರು. ಕೇಕ್ ಕತ್ತರಿಸಿದ ಬಳಿಕ ಅವರು ವೇದಿಕೆಯ ಮೇಲೆ ಬಂದು ಅಭಿಮಾನಿಗಳೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಒಟ್ಟಿನಲ್ಲಿ, ಬಾದ್ ಷಾ ಕಿಚ್ಚ ಸುದೀಪ್ ಅವರ 52ನೇ ಹುಟ್ಟುಹಬ್ಬ ಅಭಿಮಾನಿಗಳ ನೆನಪಿನಲ್ಲಿ ಉಳಿಯುವಂತಾದ ಅದ್ಧೂರಿ ಸಂಭ್ರಮವಾಗಿ ಮಾರ್ಪಟ್ಟಿದೆ.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
