ವಿಷ್ಣು ಸ್ಮಾರಕದ ಬಗ್ಗೆ ರಮ್ಯಾ ಭಾವುಕರ ಪೋಸ್ಟ್


ಅಭಿಮಾನಿಗಳ ಹೃದಯವನ್ನು ನೋವುಗೊಳಿಸಿದ ಘಟನೆ ಎಂದರೆ ಅಭಿಮಾನ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮಗೊಳಿಸಿದದ್ದು. ಈ ವಿಷಯ ಈಗಾಗಲೇ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ತಮ್ಮ ಇನ್‌ಸ್ಟಾಗ್ರಾಂನಲ್ಲಿ ಭಾವುಕರ ಸ್ಟೋರಿ ಹಂಚಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ಫೋಟೋ ಜೊತೆಗೂಡಿ, ಅವರು “ಸಾಧಕನಿಗೆ ಸಾವಿಲ್ಲ, ಅಭಿಮಾನಿಗಳ ಹೃದಯವೇ ನಿಮಗೆ ಗುಡಿ” ಎಂದು ಬರೆದುಕೊಂಡಿದ್ದಾರೆ.
ಹಿಂದೆ ನಟ ಅನಿರುದ್ಧ ಕೂಡಾ ವಿಷ್ಣು ಅಭಿಮಾನಿಗಳ ಪರ ನಿಂತು, “ಸ್ಮಾರಕ ಪುನರ್ ನಿರ್ಮಾಣಕ್ಕೆ ನಾವಿದ್ದೇವೆ” ಎಂದು ಹೇಳಿ ಬೆಂಬಲ ಸೂಚಿಸಿದ್ದರು. ಅಭಿಮಾನ ಸ್ಟುಡಿಯೋದಲ್ಲಿ ನಡೆದ ಘಟನೆ ಖಂಡನೀಯ ಮತ್ತು ನೋವುಂಟುಮಾಡಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ, ಅಭಿಮಾನಿಗಳ ಪ್ರೀತಿಯೇ ವಿಷ್ಣುವರ್ಧನ್ ಅವರಿಗೆ ನಿಜವಾದ ಸ್ಮಾರಕ ಎಂದು ಮತ್ತೊಮ್ಮೆ ಸಾಬೀತಾಗಿದೆ.