Back to Top

ವಿಷ್ಣು ಸರ್‌ ನಮ್ಮ ಹೃದಯದಲ್ಲಿ ಶಾಶ್ವತ – ರಿಯಲ್ ಸ್ಟಾರ್ ಉಪೇಂದ್ರ

SSTV Profile Logo SStv August 11, 2025
"ವಿಷ್ಣು ಸಮಾಧಿ ವಿವಾದಕ್ಕೆ ಉಪ್ಪಿಯ ತೀವ್ರ ಪ್ರತಿಕ್ರಿಯೆ"
"ವಿಷ್ಣು ಸಮಾಧಿ ವಿವಾದಕ್ಕೆ ಉಪ್ಪಿಯ ತೀವ್ರ ಪ್ರತಿಕ್ರಿಯೆ"

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿ ನೆಲಸಮಗೊಂಡ ಘಟನೆ ಕರ್ನಾಟಕದಾದ್ಯಂತ ಅಭಿಮಾನಿಗಳಲ್ಲಿ ಬೇಸರ ಮತ್ತು ಆಕ್ರೋಶ ಉಂಟುಮಾಡಿದೆ. ಈ ಬಗ್ಗೆ ಹಲವು ಕಲಾವಿದರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವ, ರಿಯಲ್ ಸ್ಟಾರ್ ಉಪೇಂದ್ರ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಬಸವಣ್ಣನವರ ವಚನವನ್ನು ಉಲ್ಲೇಖಿಸಿ, “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ”
ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ ಅಭಿಮಾನಿಗಳ ಹೃದಯಗಳಲ್ಲಿ ಎಂದೆಂದಿಗೂ ಶಾಶ್ವತ ಎಂದು ಹೇಳಿದ್ದಾರೆ. ಈ ಭಾವುಕ ಸಂದೇಶ ಅಭಿಮಾನಿಗಳ ಮನದಲ್ಲಿ ಮತ್ತಷ್ಟು ನೆನಪುಗಳನ್ನು ಎಬ್ಬಿಸಿದೆ.