ಇನ್‌ಸ್ಟಾಗ್ರಾಂ ಬಯೋದಲ್ಲಿ 11:11 – ವಿಜಯಲಕ್ಷ್ಮಿ ದರ್ಶನ್ ನೀಡಿದ ಸ್ಪೆಷಲ್ ಮೆಸೇಜ್!


ನಟ ದರ್ಶನ್ ಜೈಲಿನಲ್ಲಿ ಇರೋ ಈ ಸಂದರ್ಭದಲ್ಲಿ, ಪತ್ನಿ ವಿಜಯಲಕ್ಷ್ಮಿ ದರ್ಶನ್ ಗಂಡನ ಕೆಲಸ, ಕುಟುಂಬ, ಅಭಿಮಾನಿಗಳ ಜೊತೆಗಿನ ಸಂಪರ್ಕ ಎಲ್ಲವನ್ನೂ ಸ್ವತಃ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ “11:11” ಎಂದು ಬರೆದಿರುವುದು ಎಲ್ಲರ ಗಮನ ಸೆಳೆದಿದೆ.
ಸಂಖ್ಯಾಶಾಸ್ತ್ರ ಪ್ರಕಾರ 11:11 ಎಂಬುದು ಆಧ್ಯಾತ್ಮಿಕ ಮಹತ್ವ ಹೊಂದಿರುವ ಸಂಕೇತ. ಇದನ್ನು ಬ್ರಹ್ಮಾಂಡದಿಂದ ಬರುವ ಶುಭಸಂದೇಶವೆಂದು ಪರಿಗಣಿಸಲಾಗುತ್ತದೆ. ಜೀವನದಲ್ಲಿ ನೀವು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೀರಿ ಎಂಬ ಸೂಚನೆ ಎಂದೂ ನಂಬಿಕೆ ಇದೆ. ವಿಶೇಷವಾಗಿ ವಿವಾಹಿತ ದಂಪತಿಗಳ ನಡುವೆ ಈ ಸಂಖ್ಯೆ ಹೊಂದಾಣಿಕೆ, ಆಳವಾದ ಬಾಂಧವ್ಯ ಹಾಗೂ ಒಕ್ಕೂಟವನ್ನು ಸೂಚಿಸುತ್ತದೆ. ಅಂದರೆ "ವಿ ಆರ್ ಟೀಮ್" ಎಂಬ ಸಂದೇಶವನ್ನು ನೀಡುತ್ತದೆ.
ಹೀಗಾಗಿ ವಿಜಯಲಕ್ಷ್ಮಿ ತಮ್ಮ ಬಯೋದಲ್ಲಿ 11:11 ಅನ್ನು ಬಳಸಿರುವುದು, ಗಂಡನೊಂದಿಗೆ ತಮ್ಮ ಬಲವಾದ ಸಂಬಂಧ ಮತ್ತು ಆಧ್ಯಾತ್ಮಿಕ ನಂಬಿಕೆಯನ್ನು ಅಭಿಮಾನಿಗಳಿಗೆ ತೋರುವ ಸಂಕೇತವೆಂದು ಹೇಳಬಹುದು.