Back to Top

ಉಪ್ಪಿ ಮನೆಯಲ್ಲಿ ಅದ್ದೂರಿ ವರಮಹಾಲಕ್ಷ್ಮಿ ಹಬ್ಬ – ಪ್ರಿಯಾಂಕಾ ಉಪೇಂದ್ರ ಹಂಚಿದ ವಿಶೇಷ ಕ್ಷಣಗಳು

SSTV Profile Logo SStv August 9, 2025
ಉಪ್ಪಿ ಮನೆಯಲ್ಲಿ ಅದ್ದೂರಿ ವರಮಹಾಲಕ್ಷ್ಮಿ ಹಬ್ಬ
ಉಪ್ಪಿ ಮನೆಯಲ್ಲಿ ಅದ್ದೂರಿ ವರಮಹಾಲಕ್ಷ್ಮಿ ಹಬ್ಬ

ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಯಿತು. ಸದಾ ಹಬ್ಬದ ಸಂಭ್ರಮವನ್ನು ಕುಟುಂಬದೊಂದಿಗೆ ಹಂಚಿಕೊಳ್ಳುವ ಉಪ್ಪಿ ಫ್ಯಾಮಿಲಿ, ಈ ವರ್ಷವೂ ಅದೇ ಉತ್ಸಾಹದೊಂದಿಗೆ ಪೂಜಾ ಕಾರ್ಯಕ್ರಮ ನಡೆಸಿತು.

ಪ್ರಿಯಾಂಕಾ ಉಪೇಂದ್ರ ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಿ, ಉಪೇಂದ್ರ ತಮ್ಮದೇ ಶೈಲಿಯ ಪಂಚೆಯಲ್ಲಿ ಕಾಣಿಸಿಕೊಂಡರು. ಹಬ್ಬಕ್ಕೆ ವಿಶೇಷವಾಗಿ ಅಲಂಕರಿಸಲಾದ ಲಕ್ಷ್ಮಿ ದೇವಿಯನ್ನು ಮನೆಯಲ್ಲಿ ಪೂಜಾ ಕುಳಿತು ಆರಾಧಿಸಿದರು. ಸದಾಶಿವನಗರದ ವಿಶಾಲ ಮನೆಯಲ್ಲಿ ಈ ಬಾರಿ ಹಬ್ಬ ಆಚರಣೆ ನಡೆದಿದ್ದು, ಅಲಂಕಾರ, ಹೂವಿನ ಸಿಂಗಾರ, ದೀಪದ ಹೊಳಪು ಎಲ್ಲವೂ ಮನಮೋಹಕವಾಗಿತ್ತು. ಹಬ್ಬದ ಸಡಗರದ ಫೋಟೋಗಳನ್ನು ಪ್ರಿಯಾಂಕಾ ಉಪೇಂದ್ರ ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಹಂಚಿಕೊಂಡು, ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದರು. ಉಪೇಂದ್ರ ಕೂಡಾ ತಮ್ಮ ಅಭಿಮಾನಿಗಳೊಂದಿಗೆ ಈ ಕ್ಷಣಗಳನ್ನು ಹಂಚಿಕೊಂಡಿದ್ದು, ಫೋಟೋಗಳನ್ನು ನೋಡಿ ಅಭಿಮಾನಿಗಳು ಹರ್ಷಭರಿತರಾಗಿ ಶುಭಾಶಯ ಹಾಗೂ ಹೃದಯದ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಉಪ್ಪಿ ಕುಟುಂಬದ ಹಬ್ಬದ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಎಲ್ಲರ ಗಮನ ಸೆಳೆದಿವೆ. ಇದೇ ಸಂದರ್ಭದಲ್ಲಿ ಕನ್ನಡದ ಇನ್ನಿತರ ಕಲಾವಿದರು ನಟಿ ತಾರಾ ಹಾಗೂ ರಕ್ಷಿತಾ ಪ್ರೇಮ್ ತಮ್ಮ ಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸಿದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಉಪ್ಪಿ ಮನೆಯಲ್ಲಿ ನಡೆದ ಈ ಹಬ್ಬ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಆತ್ಮೀಯ ಕ್ಷಣಗಳ ಹಬ್ಬವಾಗಿಯೂ ಪರಿಣಮಿಸಿದೆ.