ಮಿಸ್ಟರ್ & ಮಿಸೆಸ್ ರಾಮಾಚಾರಿ ಜೋಡಿಗೆ 9ನೇ ವರ್ಷದ ಎಂಗೇಜ್‌ಮೆಂಟ್ ಸಂಭ್ರಮ


ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್, ತಮ್ಮ ನಿಶ್ಚಿತಾರ್ಥಕ್ಕೆ ಇಂದಿಗೆ (ಆ.12) ಭರ್ತಿ 9 ವರ್ಷ ಪೂರೈಸಿಕೊಂಡಿದ್ದಾರೆ. 2016ರ ಆಗಸ್ಟ್ 12ರಂದು ಗೋವಾದಲ್ಲಿ ಅದ್ಧೂರಿಯಾಗಿ ನಡೆದ ನಿಶ್ಚಿತಾರ್ಥವು, ಆ ವರ್ಷದ ಡಿಸೆಂಬರ್‌ನಲ್ಲಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ನಡೆದ ಮದುವೆಯೊಂದಿಗೆ ನೆನಪಿನ ಪುಟಗಳಲ್ಲಿ ಸೇರಿತು.
ಈ ವಿಶೇಷ ದಿನದ ನೆನಪನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಅಭಿಮಾನಿಗಳಿಂದ ಶುಭಾಶಯಗಳನ್ನು ಪಡೆದಿದ್ದಾರೆ. ಮದುವೆಯ ನಂತರ ಮೈಸೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳಿಗೆ ವಿಶೇಷ ಔತಣಕೂಟ ಏರ್ಪಡಿಸಿದ ಈ ಜೋಡಿ, ಇಂದಿಗೂ ಸ್ಯಾಂಡಲ್‌ವುಡ್‌ನ ಅತ್ಯಂತ ಪ್ರೀತಿಸಲ್ಪಟ್ಟ ದಂಪತಿಗಳಲ್ಲಿ ಒಂದಾಗಿದೆ.
ಸದ್ಯ ಯಶ್ ಟಾಕ್ಸಿಕ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಬಾಲಿವುಡ್‌ನ ರಾಮಾಯಣ ಚಿತ್ರದಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕೆಜಿಎಫ್ ನಂತರ ಅವರ ಮುಂದಿನ ಸಿನಿಮಾಗೆ ಅಭಿಮಾನಿಗಳು ಭಾರೀ ನಿರೀಕ್ಷೆಯಲ್ಲಿದ್ದಾರೆ.