‘ಟಾಕ್ಸಿಕ್’ ಗಾಗಿ ಕೆಲಸ ಮಾಡುತ್ತಿದೆ ಹಾಲಿವುಡ್‌ನ ಖ್ಯಾತ ಸಂಸ್ಥೆ


‘ಟಾಕ್ಸಿಕ್’ ಗಾಗಿ ಕೆಲಸ ಮಾಡುತ್ತಿದೆ ಹಾಲಿವುಡ್‌ನ ಖ್ಯಾತ ಸಂಸ್ಥೆ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ನಿರೀಕ್ಷೆಯಲ್ಲಿರುವ ಸಿನಿಮಾ. ಈ ಭಾರಿ ಬಜೆಟ್ ಚಿತ್ರಕ್ಕೆ ಹಾಲಿವುಡ್‌ನ ಪ್ರಸಿದ್ಧ ವಿಎಫ್‌ಎಕ್ಸ್ ಕಂಪೆನಿ ಡಿಎನ್‌ಇಜಿ ತನ್ನ ಸೇವೆ ನೀಡುತ್ತಿದೆ. ಡಿಎನ್‌ಇಜಿ, 'ಡೂನ್', 'ಇಂಟರ್ಸ್ಟೆಲ್ಲರ್', 'ಇನ್ಸೆಪ್ಷನ್' ಸೇರಿದಂತೆ ಹಲವಾರು ಐಕಾನಿಕ್ ಸಿನಿಮಾಗಳಿಗೆ ವಿಎಫ್‌ಎಕ್ಸ್ ಮಾಡಿದೆ. 'ಟಾಕ್ಸಿಕ್' ಚಿತ್ರದಲ್ಲಿ ಇಂತಹ ಉತ್ತಮ ವಿಎಫ್‌ಎಕ್ಸ್ ದೃಶ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಸಾಧ್ಯವಾಗಲಿದೆ.
ಇದೇ ಅಲ್ಲದೆ, ಹಾಲಿವುಡ್‌ನ ಖ್ಯಾತ ಫೈಟ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ಈ ಸಿನಿಮಾದ ಆಕ್ಷನ್ ದೃಶ್ಯಗಳಿಗೆ ಮಾಸ್ಟರ್‌ಮೈಂಡ್ ಆಗಿದ್ದಾರೆ. ನಟಿಯರಾಗಿ ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಟಾಕ್ಸಿಕ್' ಸಿನಿಮಾದ ಬಿಡುಗಡೆ 2025ರ ಏಪ್ರಿಲ್ 10ಕ್ಕೆ ನಿರ್ಧಾರವಾಗಿದ್ದರೂ, ಅದು ಮುಂದೂಡಲಾಗುವ ಸಾಧ್ಯತೆ ಇದೆ ಎಂದು ಯಶ್ ತಿಳಿಸಿದ್ದಾರೆ.