Back to Top

ರೇಣುಕಾಸ್ವಾಮಿ ಹತ್ಯೆ ಪ್ರಕರಣ – ತೀರ್ಪಿಗೂ ಮುನ್ನ ಪವಿತ್ರಾ ಗೌಡದ ಭಾವನಾತ್ಮಕ ಪೋಸ್ಟ್

SSTV Profile Logo SStv August 14, 2025
ತೀರ್ಪಿಗೂ ಮುನ್ನ ಪವಿತ್ರಾ ಗೌಡ ಭಾವನಾತ್ಮಕ ಪೋಸ್ಟ್ ವೈರಲ್!
ತೀರ್ಪಿಗೂ ಮುನ್ನ ಪವಿತ್ರಾ ಗೌಡ ಭಾವನಾತ್ಮಕ ಪೋಸ್ಟ್ ವೈರಲ್!

ರೇಣುಕಾಸ್ವಾಮಿ  ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಯ ಜಾಮೀನು ಮುಂದುವರೆಯುತ್ತದೆಯೇ ಅಥವಾ ರದ್ದು ಆಗುತ್ತದೆಯೇ ಎಂಬ ನಿರ್ಧಾರ ಇಂದು (ಆಗಸ್ಟ್ 14) ಹೊರಬೀಳಲಿದೆ.

ತೀರ್ಪು ಹೊರಬೀಳುವ ಮುನ್ನ, ಆರೋಪಿ ಪವಿತ್ರಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. “ಸತ್ಯವು ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ. ಅದು ಯಾವಾಗಲೂ ನ್ಯಾಯ ಕೊಡುತ್ತದೆ. ಎಷ್ಟೇ ಸಮಯ ತೆಗೆದುಕೊಂಡರೂ, ನ್ಯಾಯ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ” ಎಂದು ಅವರು ಬರೆದಿದ್ದಾರೆ.

ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ, ರಾಜ್ಯ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈಗ, ಜಾಮೀನು ಮುಂದುವರಿಯುತ್ತದೆಯೇ ಅಥವಾ ರದ್ದು ಆಗುತ್ತದೆಯೇ ಎಂಬ ಕುತೂಹಲ ತಾರಕ್ಕೇರಿದೆ.