"LOVE YOU ಬಂಗಾರ" – ವೇದಿಕೆಯಲ್ಲಿ ತರುಣ್ ಸುಧೀರ್ ನೀಡಿದ ಸರ್‌ಪ್ರೈಸ್‌ಗೆ ಸೋನಲ್ ಫುಲ್ ಎಮೋಷನಲ್!


ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂತೆರೋ ಅವರ ವೈವಾಹಿಕ ಜೀವನಕ್ಕೆ ಒಂದು ವರ್ಷ ಪೂರ್ತಿಯಾಗಿದ್ದು, ಈ ವಿಶೇಷ ಕ್ಷಣವನ್ನು ಮಹಾನಟಿ ಶೋ ವೇದಿಕೆಯಲ್ಲಿ ಸಿಹಿ ಸರ್‌ಪ್ರೈಸ್ ಮೂಲಕ ಆಚರಿಸಿದರು.
ಜೀ ಕನ್ನಡ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪ್ರೋಮೋದಲ್ಲಿ, ತರುಣ್ ಅವರು ಪತ್ನಿ ಸೋನಲ್‌ಗಾಗಿ ಮದುವೆ ಫೋಟೋ ಫ್ರೇಮ್ ಹಾಗೂ ಬಲೂನ್‌ಗಳೊಂದಿಗೆ ಸಜ್ಜುಗೊಂಡ ಸ್ಮರಣೀಯ ಗಿಫ್ಟ್ ನೀಡಿದ್ದಾರೆ. ಈ ಕ್ಯೂಟ್ ಸರ್‌ಪ್ರೈಸ್ ನೋಡಿ ಖುಷಿಯಾದ ಸೋನಲ್, ತಾವು ತರುಣ್ ಅವರನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದನ್ನು ‘ಲವ್ ಯೂ ಬಂಗಾರ’ ಎಂಬ ಮಾತಿನಿಂದ ವ್ಯಕ್ತಪಡಿಸಿದರು.
2024ರ ಆಗಸ್ಟ್ 11ರಂದು, ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಈ ವರ್ಷದ ಸಿಹಿ ನೆನಪನ್ನು, ಒಂದು ವಾರ ಮುಂಚಿತವಾಗಿ ಸೆಲೆಬ್ರೇಟ್ ಮಾಡಿರುವ ತರುಣ್–ಸೋನಲ್ ಜೋಡಿಯ ಈ ರೊಮ್ಯಾಂಟಿಕ್ ಮೊಮೆಂಟ್ ಇದೀಗ ಎಲ್ಲರ ಮನ ಸೆಳೆಯುತ್ತಿದೆ.