"ಇದ್ರೆ ನೆಮ್ದಿಯಾಗಿರ್ಬೇಕ್: ಆಗಸ್ಟ್ 15ರಂದು ‘ಡೆವಿಲ್’ ಹಾಡಿನ ಗ್ರ್ಯಾಂಡ್ ರಿಲೀಸ್"


ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾದ ಮೊದಲ ಹಾಡು ಆಗಸ್ಟ್ 15ರಂದು ಬೆಳಗ್ಗೆ 10.05ಕ್ಕೆ ಬಿಡುಗಡೆಯಾಗಲಿದೆ. ಈ ಬಗ್ಗೆ ಸ್ವತಃ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ. “ಇದ್ರೆ ನೆಮ್ದಿಯಾಗಿರ್ಬೇಕ್” ಎಂಬ ಶೀರ್ಷಿಕೆಯ ಫಸ್ಟ್ ಸಿಂಗಲ್‌ಗೆ ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ಕುತೂಹಲವಿದೆ.
ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಕಾರ್ಯ ಸಂಪೂರ್ಣ ಮುಗಿದಿದ್ದು, ಪೋಸ್ಟ್-ಪ್ರೊಡಕ್ಷನ್ ಹಂತ ಜೋರಾಗಿ ನಡೆಯುತ್ತಿದೆ. ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿರುವ ಈ ಚಿತ್ರವನ್ನು ಅವರೇ ನಿರ್ಮಾಣ ಮಾಡಿದ್ದಾರೆ. ಥೈಲ್ಯಾಂಡ್‌ನಲ್ಲಿ ದರ್ಶನ್ ಹಾಗೂ ನಟಿ ರಚನಾ ರೈ ಅಭಿನಯದ ಎರಡು ಹಾಡುಗಳನ್ನು ಚಿತ್ರೀಕರಿಸಲಾಗಿದೆ.
ಚಿತ್ರಕ್ಕೆ ಸುಧಾಕರ್ ಎಸ್.ರಾಜ್ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾದ ಬಿಡುಗಡೆಯ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸದಿದ್ದರೂ, ಮುಂದಿನ ಎರಡು ತಿಂಗಳಲ್ಲಿ ತೆರೆಗೆ ಬರಲಿರುವ ನಿರೀಕ್ಷೆಯಿದೆ.