ಜೂ ಎನ್‌ಟಿಆರ್ ಬಾಡಿ ಲಾಂಗ್ವೇಜ್, ಹೃತಿಕ್ ಆಕರ್ಷಣೆ – ‘ವಾರ್ 2’ ಹೈಲೈಟ್ಸ್ ಇಲ್ಲಿವೆ


ಜೂ ಎನ್‌ಟಿಆರ್ ಮತ್ತು ಹೃತಿಕ್ ರೋಷನ್ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡಿರುವ ವಾರ್ 2 ಇಂದು (ಆಗಸ್ಟ್ 14) ಭರ್ಜರಿಯಾಗಿ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಮಾಸ್ ಸ್ಟಾರ್ ಮತ್ತು ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಒಟ್ಟಿಗೆ ಬಂದಿದ್ದರಿಂದಲೇ ಅಭಿಮಾನಿಗಳ ನಿರೀಕ್ಷೆ ಆಕಾಶ ಮುಟ್ಟಿತ್ತು. ಬಿಡುಗಡೆಯಾದ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ #War2 ಟ್ರೆಂಡ್ ಆಗತೊಡಗಿತು.
ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಬೆಳಗ್ಗೆ 6 ಗಂಟೆಯ ಶೋ ಆಯೋಜಿಸಲಾಯಿತು. ವಿದೇಶದಲ್ಲಿಯೂ ಮೊದಲ ಪ್ರದರ್ಶನ ನಡೆದಿದ್ದು, ಅಲ್ಲಿಂದಲೂ ಪ್ರತಿಕ್ರಿಯೆಗಳು ಹರಿದುಬಂದವು. ಜೂ ಎನ್‌ಟಿಆರ್ ಅವರ ಅಭಿಮಾನಿಗಳು, ಹೃತಿಕ್ ಫ್ಯಾನ್ಸ್ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡರು.
ಅಭಿಮಾನಿಗಳ ಪ್ರಕಾರ, ಇಬ್ಬರು ಸ್ಟಾರ್‌ಗಳು ಎದುರು ಬದುರಾಗುವ ಸೀನ್‌ಗಳು ಸಿನಿಮಾದ ಹೈಲೈಟ್ ಆಗಿವೆ. ಜೂ ಎನ್‌ಟಿಆರ್ ಅವರ ಬಾಡಿ ಲಾಂಗ್ವೇಜ್, ಹೃತಿಕ್ ರೋಷನ್ ಅವರ ಸ್ಟೈಲ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಎರಡೂ ಅದ್ಭುತವಾಗಿದೆ. ಹಿನ್ನೆಲೆ ಸಂಗೀತ (BGM) ಹಲವರ ಮನಸ್ಸು ಕದ್ದಿದೆ. ಬಹುತೇಕ ರಿವ್ಯೂಗಳ ಪ್ರಕಾರ, ಮೊದಲಾರ್ಧದಲ್ಲಿ ಆಕ್ಷನ್, ಟ್ವಿಸ್ಟ್, ಹಾಡುಗಳು, ಗ್ರ್ಯಾಂಡ್ ಲೋಕೇಶನ್‌ಗಳು ಎಲ್ಲವೂ ಫುಲ್ ಪ್ಯಾಕೇಜ್. ಆದರೆ, ದ್ವಿತೀಯಾರ್ಧದಲ್ಲಿ ಪೇಸ್ ಸ್ವಲ್ಪ ಕುಗ್ಗುತ್ತದೆ. ಆದರೂ ಕ್ಲೈಮ್ಯಾಕ್ಸ್‌ನಲ್ಲಿ ಮತ್ತೆ ಹೈ ವೋಲ್ಟೇಜ್ ಸೀಕ್ವೆನ್ಸ್ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.
ಎಲ್ಲರೂ ಸಿನಿಮಾವನ್ನು ಆಕಾಶಕ್ಕೆತ್ತಿಲ್ಲ. ಕೆಲವರು ‘ವಾರ್ 2’ ಮಧ್ಯಮ ಮಟ್ಟದ ಸಿನಿಮಾ ಎಂದು ಹೇಳಿದ್ದಾರೆ. ಕೆಲ ಸೀನ್‌ಗಳು ಅದ್ಭುತವಾದರೂ, ಕೆಲವು ಭಾಗಗಳು ಬೇಸರ ತಂದಿವೆ ಎಂಬ ಅಭಿಪ್ರಾಯವೂ ಬಂದಿದೆ. ಆದರೆ ಒಳ್ಳೆಯ ಕ್ಲೈಮ್ಯಾಕ್ಸ್ ಚಿತ್ರದ ಮೌಲ್ಯವನ್ನು ಎತ್ತಿದೆ. ಕಿಯಾರಾ ಅಡ್ವಾನಿ ಅವರ ಸ್ಟೈಲ್ ಮತ್ತು ಗ್ಲಾಮರ್ ಸಿನಿಮಾಕ್ಕೆ ಹೆಚ್ಚುವರಿ ಮೆರಗು ನೀಡಿದೆ. ಅವರ ಪಾತ್ರ ದೊಡ್ಡದಾಗದಿದ್ದರೂ, ಪ್ರೇಕ್ಷಕರ ಗಮನ ಸೆಳೆಯಲು ಸಾಕಾಯಿತು.
ವಾರ್ 2 ಒಂದು ಭರ್ಜರಿ ಆಕ್ಷನ್ ಎಂಟರ್‌ಟೈನರ್, ಆದರೆ ಸಂಪೂರ್ಣವಾಗಿ ‘ಮೈಂಡ್ ಬ್ಲೋಯಿಂಗ್’ ಎಂದು ಹೇಳಲು ಸ್ವಲ್ಪ ಜಾಗ ಉಳಿದಿದೆ. ಜೂ ಎನ್‌ಟಿಆರ್ ಹೃತಿಕ್ ರೋಷನ್ ಕಾಂಬೋಗೆ ಮಾತ್ರ 100% ಮಾರ್ಕ್ಸ್ ಕೊಡಬಹುದು. ಅಭಿಮಾನಿಗಳಿಗೆ ಹಬ್ಬ, ಸಾಮಾನ್ಯ ಪ್ರೇಕ್ಷಕರಿಗೆ ಒಂದು ಸಾರಿ ನೋಡಬಹುದಾದ ಸಿನಿಮಾ.