Back to Top

ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಗ್‌ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ

SSTV Profile Logo SStv August 11, 2025
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ತನಿಷಾ ಹುಟ್ಟುಹಬ್ಬ
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ತನಿಷಾ ಹುಟ್ಟುಹಬ್ಬ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 10‌ನ ಮಾಜಿ ಸ್ಪರ್ಧಿ ತನಿಷಾ ಕುಪ್ಪಂಡ ಸದ್ಯ ಸಖತ್ ಖುಷಿಯಲ್ಲಿದ್ದಾರೆ. ಕಾರಣವೇನೆಂದರೆ ಅವರ ಹುಟ್ಟುಹಬ್ಬ.

ಹುಟ್ಟುಹಬ್ಬದ ವಿಶೇಷ ದಿನವನ್ನು ತನಿಷಾ ತಮ್ಮ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಜೊತೆ ಭರ್ಜರಿಯಾಗಿ ಆಚರಿಸಿಕೊಂಡರು. ಬಾರ್ಬಿ ಡಾಲ್​ ತರ ರೆಡಿಯಾಗಿ ಮಿಂಚಿದ್ದಾರೆ, ಕೇಕ್ ಕಟ್ ಮಾಡಿದ ನಟಿ, ತನ್ನ ಬ್ಯೂಟಿಫುಲ್ ಲುಕ್‌ನಿಂದ ಎಲ್ಲರ ಗಮನ ಸೆಳೆದರು. ತನಿಷಾ ಅವರ ಬರ್ತ್‌ಡೇ ಪಾರ್ಟಿಗೆ ಬಿಗ್‌ಬಾಸ್ ಸೀಸನ್ 10 ವಿಜೇತ ಕಾರ್ತಿಕ್ ಮಹೇಶ್ ಕೂಡ ಹಾಜರಾಗಿ ಅವರಿಗೆ ವಿಶೇಷವಾಗಿ ಶುಭಾಶಯ ಕೋರಿದರು.

ಸದ್ಯ ತನಿಷಾ ಕುಪ್ಪಂಡ ಅವರ ಹುಟ್ಟುಹಬ್ಬದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ತನಿಷಾ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಹುಟ್ಟುಹಬ್ಬದ ಕ್ಷಣಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು “ಹ್ಯಾಪಿ ಬರ್ತ್‌ಡೇ” ಸಂದೇಶಗಳ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.