Back to Top

ಮಾಡರ್ನ್ ಹುಡುಗಿಯಿಂದ ಸೀರೆ ಕ್ವೀನ್‌ವರೆಗೆ – ಮೌನ ಗುಡ್ಡೆಮನೆ ಸ್ಟೈಲ್ ಜರ್ನಿ ಹಾಟ್ ಟಾಪಿಕ್!

SSTV Profile Logo SStv August 13, 2025
ಸೀರೆ ಸೌಂದರ್ಯದಲ್ಲಿ ಮಿಂಚಿದ ಮೌನ ಗುಡ್ಡೆಮನೆ
ಸೀರೆ ಸೌಂದರ್ಯದಲ್ಲಿ ಮಿಂಚಿದ ಮೌನ ಗುಡ್ಡೆಮನೆ

ರಾಮಾಚಾರಿ ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಟಿ ಮೌನ ಗುಡ್ಡೆಮನೆ ಅka ಚಾರು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳ ಮೂಲಕ ಅಭಿಮಾನಿಗಳನ್ನು ಮತ್ತೊಮ್ಮೆ ಮೆಚ್ಚಿಸಿದ್ದಾರೆ. ಸೀರೆಯ ಮೇಲೆ ವಿಶೇಷ ಒಲವು ಹೊಂದಿರುವ ಮೌನ, ಈ ಬಾರಿ ತಿಳಿ ನೀಲಿ ಹಾಗೂ ತಿಳಿ ಹಸಿರು ಬಣ್ಣದ ಸೀರಿಯಲ್ಲಿ ಮಿಂಚಿದ್ದಾರೆ.

ಧಾರಾವಾಹಿಯಲ್ಲಿನ ಪಾತ್ರದಂತೆ, ಮೌನ ಅವರ ಉಡುಗೆ ಶೈಲಿಯೂ ಹಂತ ಹಂತವಾಗಿ ಬದಲಾಗುತ್ತಿದೆ – ಆರಂಭದಲ್ಲಿ ಮಾಡರ್ನ್ ಡ್ರೆಸ್ಸುಗಳಿಂದ ಚೂಡಿದಾರ್, ಈಗ ಸಂಪೂರ್ಣ ಸೀರೆ ಲುಕ್. ಇನ್‌ಸ್ಟಾಗ್ರಾಂನಲ್ಲಿ ಹಂಚಿದ ಫೋಟೋಗಳಿಗೆ ಅಭಿಮಾನಿಗಳಿಂದ “ಅಬ್ಬಬ್ಬಾ ಚಾರು ಸೂಪರ್”, “ನಮ್ಮ ಮುದ್ದು ಮೌನ” ಎಂಬ ಹೊಗಳಾಟ ಮಳೆ ಸುರಿಯುತ್ತಿದೆ.

ಕಿರುತೆರೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಮೌನ, ಈಗ ಅಭಿಮಾನಿಗಳ ಹೃದಯದಲ್ಲಿ "ಚಾರು" ಆಗಿ ಸದಾ ಪ್ರಿಯರಾಗಿದ್ದಾರೆ.