Back to Top

ವಸಿಷ್ಠ ಸಿಂಹ - ಹರಿಪ್ರಿಯ ಮಗನ ಅದ್ಧೂರಿ ನಾಮಕರಣ! ಮಗನ ಹೆಸರೇನು? ಯಾರೆಲ್ಲಾ ಬಂದಿದ್ರು?

SSTV Profile Logo SStv August 18, 2025
`ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ
`ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ

ಸ್ಯಾಂಡಲ್‌ವುಡ್‌ನ ‘ಸಿಂಹಪ್ರಿಯ’ ಜೋಡಿ ಎಂದೇ ಖ್ಯಾತಿ ಪಡೆದ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ, ತಮ್ಮ ಮುದ್ದಾದ ಮಗನಿಗೆ ವಿಪ್ರಾ ಎನ್ ಸಿಂಹ ಎಂದು ಹೆಸರಿಟ್ಟಿದ್ದಾರೆ.

ಈ ಹೆಸರಿನ ಹಿಂದೆ ವಿಶೇಷ ಅರ್ಥವಿದೆ. “ವಿ” ಅಂದರೆ ವಸಿಷ್ಠ, “ಹೆಚ್” ಅಂದರೆ ಹರಿಪ್ರಿಯಾ. ಮಧ್ಯದಲ್ಲಿ ಇರುವ ವಿಐಪಿ ಕೇವಲ “ವೆರೀ ಇಂಪಾರ್ಟೆಂಟ್ ಪರ್ಸನ್” ಅಲ್ಲ, ಇಲ್ಲಿ ವಿ ಎಂದರೆ ವಿಷ್ಣು, ಹರ್ ಎಂದರೆ ಹರ (ಶಿವ) ಹಾಗೂ ಹರಿಪ್ರಿಯಾ. ಹೀಗಾಗಿ ಈ ಹೆಸರು ವಿಷ್ಣು-ಶಿವ ಸಮಾಗಮದ ಸಂಕೇತ. ಹರಿಪ್ರಿಯಾ ಹೇಳುವಂತೆ, ಮಗುವಿಗೆ ಹೆಸರಿಡುವುದು ಅವರ ಜೀವನದ ಅತ್ಯಂತ ಭಾವನಾತ್ಮಕ ಕ್ಷಣ. “ಮಗುವಿನ ಕಿವಿಯಲ್ಲಿ ಹೆಸರನ್ನು ಹೇಳುವಾಗ ಕಣ್ಣಲ್ಲಿ ನೀರು ತುಂಬಿತು” ಎಂದು ಅವರು ಹಂಚಿಕೊಂಡಿದ್ದಾರೆ.

ಅದರಲ್ಲೂ ವಿಶೇಷವೆಂದರೆ, ಕೃಷ್ಣ ಜನ್ಮಾಷ್ಟಮಿಯ ದಿನವೇ ನಾಮಕರಣ ನೆರವೇರಿತು. ಅಭಿಮಾನಿಗಳಲ್ಲಿ ಹುಟ್ಟಿದ್ದ ಕುತೂಹಲಕ್ಕೆ ಈಗ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ತೆರೆ ಎಳೆದಿದ್ದಾರೆ. ಒಟ್ಟಿನಲ್ಲಿ, “ವಿಪ್ರಾ ಎನ್ ಸಿಂಹ” ಎಂಬ ಹೆಸರು ಜೋಡಿಯ ಪ್ರೀತಿ ಮತ್ತು ಆಧ್ಯಾತ್ಮಿಕ ನಂಬಿಕೆಯ ಸಂಕೇತವಾಗಿದೆ.