ಸಿಗಂದೂರು ಸೇತುವೆ ಲೋಕಾರ್ಪಣೆಯ ನಂತರ ದೇವಾಲಯದ ದರ್ಶನ ಪಡೆದ ದೀಪಿಕಾ ದಾಸ್


ಕಿರುತೆರೆಯ ಜನಪ್ರಿಯ ನಟಿ ಹಾಗೂ 'ನಾಗಿಣಿ' ಧಾರಾವಾಹಿ ಮತ್ತು 'ಬಿಗ್ ಬಾಸ್' ಖ್ಯಾತಿಯ ದೀಪಿಕಾ ದಾಸ್ ಇದೀಗ ಧಾರ್ಮಿಕ ಪ್ರವಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು ಹಾಗೂ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.
ಹಸಿರು ಸೀರೆ ಧರಿಸಿಕೊಂಡು ದೇವಾಲಯಕ್ಕೆ ಹಾಜರಾದ ದೀಪಿಕಾ ದಾಸ್, ಈ ಸಂತಸದ ಕ್ಷಣಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚೌಡೇಶ್ವರಿ ತಾಯಿಯ ದರ್ಶನದಿಂದ ಧನ್ಯತಾ ಭಾವ ಉಂಟಾಗಿದೆ ಎಂದು ಅವರು ತಮ್ಮ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಇದಕ್ಕೂ ಮುನ್ನ ದೀಪಿಕಾ ದಾಸ್ ಕಾಮಾಕ್ಯ ದೇವಾಲಯಕ್ಕೂ ಭೇಟಿ ನೀಡಿದ್ದರು. ವಿದೇಶ ಪ್ರವಾಸಗಳಿಗಿಂತ ಇತ್ತೀಚೆಗೆ ಪವಿತ್ರ ತಾಣಗಳ ಕಡೆಗೆ ದೀಪಿಕಾ ದಾಸ್ ಅವರ ಮೆಲುಕು ಹೆಚ್ಚಾಗಿದೆ. 2024ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ, ಇದೀಗ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಶ್ರದ್ಧಾಭಕ್ತಿಯಿಂದ ದಿನ ಕಳೆದುತ್ತಿದ್ದಾರೆ.