ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ದರ್ಶನ್ ಸಿಬ್ಬಂದಿಗೆ ಕ್ಷಮೆ ಕೇಳಿದ ನಟ


ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ದರ್ಶನ್ ಸಿಬ್ಬಂದಿಗೆ ಕ್ಷಮೆ ಕೇಳಿದ ನಟ ಆರೋಗ್ಯ ಸಮಸ್ಯೆಯಿಂದಾಗಿ ಬಳ್ಳಾರಿ ಜೈಲಿನಿಂದ ಬಿಡುಗಡೆಗೊಂಡಿರುವ ದರ್ಶನ್, ಜೈಲಿನ ಸಿಬ್ಬಂದಿಗೆ ತಮ್ಮ ವರ್ತನೆಗೆ ಕ್ಷಮೆ ಕೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ಬಂಧಿತರಾಗಿದ್ದ ದರ್ಶನ್, ಜೈಲಿನಲ್ಲಿ ಎರಡು ತಿಂಗಳ ಕಾಲ ಚಿಕಿತ್ಸೆ ಮತ್ತು ಬೇಡಿಕೆಗಳಿಗೆ ಸಂಬಂಧಿಸಿದ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು.
ಹೊರಬಂದ ನಂತರ, ಜೈಲು ಸಿಬ್ಬಂದಿಗೆ “ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ನಿಮಗೆ ತೊಂದರೆ ಕೊಡಿದ್ದೇನೆ,” ಎಂದು ಕೃತಜ್ಞತೆ ಸೂಚಿಸಿದ ದರ್ಶನ್, ತಮ್ಮ ಔದಾರ್ಯವನ್ನು ತೋರಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ಸಹಾಯ ಮಾಡಿದ ಸಿಬಂದಿಗೆ ಧನ್ಯವಾದ ಹೇಳಿದ ದರ್ಶನ್‌ಗೆ, ಸಿಬ್ಬಂದಿಯೂ "ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ" ಎಂದು ಹಾರೈಸಿದ್ದಾರೆ.