ಹಿರಿಯ ನಟಿ ಶ್ರುತಿ ಕುಟುಂಬದ ಮಗಳು 'ದೇವರು ರುಜು ಮಾಡಿದನು' ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಸಿಂಪಲ್ ಸುನಿ ನಿರ್ದೇಶನದ 'ದೇವರು ರುಜು ಮಾಡಿದನು' ಸಿನಿಮಾದ ಮುಹೂರ್ತವು ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿತು. ಈ ಚಿತ್ರದ ಮೂಲಕ ವಿರಾಜ್, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇವರಿಗೆ ನಾಯಕಿಯಾಗಿ, ಹಿರಿಯ ನಟಿ ಶ್ರುತಿ ಹಾಗೂ ಉಷಾ ಅವರ ಪುತ್ರಿ ಕೀರ್ತಿ ಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ.
ಸಂಗೀತಪ್ರಿಯರ ಸುತ್ತಲಿರುವ ಕಥಾಹಂದರವನ್ನು ಹೊಂದಿರುವ ಈ ಸಿನಿಮಾದ ಟೀಸರ್ ಈಗಾಗಲೇ ಗಮನ ಸೆಳೆದಿದೆ. ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋವಿಂದ್ ರಾಜ್ ಸಿಟಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.