ಶಿವರಾಜ್ ಕುಮಾರ್ ಆರೋಗ್ಯ ಸಮಸ್ಯೆ ಅಭಿಮಾನಿಗಳಲ್ಲಿ ಚಿಂತೆ


ಶಿವರಾಜ್ ಕುಮಾರ್ ಆರೋಗ್ಯ ಸಮಸ್ಯೆ ಅಭಿಮಾನಿಗಳಲ್ಲಿ ಚಿಂತೆ ಕನ್ನಡ ಚಿತ್ರರಂಗದ ಮೆಗಾಸ್ಟಾರ್ ಡಾ. ಶಿವರಾಜ್ ಕುಮಾರ್ ಕಳೆದ ಕೆಲವು ತಿಂಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಅವರು "ಅನಾರೋಗ್ಯದ ಸಮಸ್ಯೆಗಳಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಭೈರತಿ ರಣಗಲ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ, ಕಳೆದ ಕೆಲವು ದಿನಗಳಿಂದ ಅವರ ಹೊರಗಡೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದ್ದು, ಅಭಿಮಾನಿಗಳಲ್ಲಿ ಚಿಂತೆ ಮೂಡಿಸಿದೆ.
ಶಿವಣ್ಣ ಅವರು ಈ ಸಮಸ್ಯೆಯನ್ನು ಎದುರಿಸುತ್ತಿದ್ದು, "ಇದನ್ನು ಜಯಿಸಿ ಮತ್ತೆ ಎಂದಿನಂತೆ ಕೆಲಸ ಮಾಡುತ್ತೇನೆ" ಎಂದು ಹೇಳಿದ್ದಾರೆ. ಅಭಿಮಾನಿಗಳು "ನೀವು ಏನೂ ಆಗಲ್ಲ, ಬೇಗ ಚೇತರಿಸಿಕೊಳ್ಳಿ" ಎಂದು ಪ್ರಾರ್ಥಿಸುತ್ತಿದ್ದಾರೆ.