'ಜೈ' ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ಜೋಡಿಯಾದ ಕುಡ್ಲದ ಬೆಡಗಿ ಅದ್ವಿತಿ ಶೆಟ್ಟಿ


'ಜೈ' ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ಜೋಡಿಯಾದ ಕುಡ್ಲದ ಬೆಡಗಿ ಅದ್ವಿತಿ ಶೆಟ್ಟಿ 'ಬಿಗ್ ಬಾಸ್ ಕನ್ನಡ 9' ವಿಜೇತ ರೂಪೇಶ್ ಶೆಟ್ಟಿ ತಮ್ಮ ಹೊಸ ಚಿತ್ರ 'ಜೈ'ನಲ್ಲಿ ನಟನ ಮತ್ತು ನಿರ್ದೇಶನದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಮಂಗಳೂರಿನ ನಟಿ ಅದ್ವಿತಿ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ತಮಗೆ ಈ ಚಿತ್ರದಲ್ಲಿ ನಾಯಕಿಯಾಗಿ ಪಾತ್ರ ಸಿಕ್ಕಿರುವುದಕ್ಕೆ ಖುಷಿಯಾಗಿರುವುದಾಗಿ ಅದ್ವಿತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಾತೃಭಾಷೆ ತುಳುವಾದರೂ, ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ಅಭಿನಯಿಸುತ್ತಿರುವ ಅದ್ವಿತಿ, ಈ ಅವಕಾಶ ನೀಡಿದ ರೂಪೇಶ್ ಮತ್ತು ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮೂಲತಃ ಮಂಗಳೂರು ನಿವಾಸಿಯಾಗಿರುವ ರೂಪೇಶ್ ಶೆಟ್ಟಿ, ತುಳು ಚಿತ್ರರಂಗಕ್ಕೆ ಹೊಸದೇನಲ್ಲ. 'ಜೈ' ಚಿತ್ರದ ಜೊತೆಗೆ ಕನ್ನಡದ ‘ಅಧಿಪತ್ರ’ ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.