“ಇಷ್ಟೆಲ್ಲಾ ಕ್ಯೂಟ್ ಆಗಿ ಕಾಣಿಸಿಕೊಂಡ್ರೆ ಹೇಗೆ?” – ರಶ್ಮಿಕಾ ಫೋಟೋಗೆ ಅಭಿಮಾನಿಗಳ ಕ್ರೇಜಿ ಕಮೆಂಟ್ಸ್


ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೆ ತಮ್ಮ ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಮನಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ರಶ್ಮಿಕಾ, ಇತ್ತೀಚೆಗೆ ಹಂಚಿಕೊಂಡ ಸೆಲ್ಫಿ ಫೋಟೋಗಳು ಈಗ ವೈರಲ್ ಆಗಿವೆ.
ಅಭಿಮಾನಿಗಳು “ಇಷ್ಟೆಲ್ಲಾ ಕ್ಯೂಟ್ ಆಗಿ ಕಾಣಿಸಿಕೊಂಡ್ರೆ ಹೇಗೆ?” ಎಂದು ಕಮೆಂಟ್ ಮಾಡುತ್ತಾ ಫೋಟೋಗಳಿಗೆ ಭರ್ಜರಿ ಲೈಕ್ಸ್ ನೀಡಿದ್ದಾರೆ. ವಿಭಿನ್ನ ಎಕ್ಸ್‌ಪ್ರೆಷನ್‌ಗಳಲ್ಲಿ ಕ್ಲಿಕ್ಕಿಸಿದ ಈ ಫೋಟೋಗಳು ಫ್ಯಾನ್ಸ್‌ಗಳಿಗೆ ತುಂಬಾ ಇಷ್ಟವಾಗಿವೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಶ್ಮಿಕಾ, ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಫೋಟೋಶೂಟ್ ಪಿಕ್ಸ್ ಹಾಗೂ ರೀಲ್ಸ್ ಹಂಚಿಕೊಳ್ಳುತ್ತಾರೆ. ಪ್ರತಿಯೊಂದು ಪೋಸ್ಟ್‌ಗೂ ಅಭಿಮಾನಿಗಳಿಂದ ಅಪಾರ ಪ್ರೀತಿ ಸಿಗುತ್ತದೆ.
ಇದೀಗ ಅವರು ನಟಿಸಿರುವ ‘ಥಮ’ ಸಿನಿಮಾ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿದೆ. ಹಾರರ್-ಕಾಮಿಡಿ ಜಾನರ್‌ನ ಈ ಸಿನಿಮಾಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಶ್ಮಿಕಾ ಮಂದಣ್ಣನ ಪ್ರತಿಯೊಂದು ಲುಕ್‌ಗೂ ಫ್ಯಾನ್ಸ್ ಕ್ರೇಝ್ ಏರಿಕೆಯಾಗುತ್ತಲೇ ಇದೆ!