Back to Top

"ಹಣ ಕೊಟ್ಟು ನನ್ನನ್ನು ಟ್ರೋಲ್ ಮಾಡಿಸಿದರು!" – ರಶ್ಮಿಕಾ ಮಂದಣ್ಣನ ಭಾರೀ ಆರೋಪ

SSTV Profile Logo SStv August 8, 2025
ರಶ್ಮಿಕಾ ಮಂದಣ್ಣ ಮನದಾಳದ ನೋವು ಹಂಚಿಕೆ
ರಶ್ಮಿಕಾ ಮಂದಣ್ಣ ಮನದಾಳದ ನೋವು ಹಂಚಿಕೆ

ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮೇಲೆ ಹಣ ನೀಡಿ ಟ್ರೋಲ್‌ ಮಾಡಿಸಲಾಯಿತು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ನಕಾರಾತ್ಮಕ ಕಮೆಂಟ್‌ಗಳು ಮತ್ತು ದ್ವೇಷಪೂರ್ಣ ಅಭಿಪ್ರಾಯಗಳ ಬಗ್ಗೆ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

“ನಾನು ಭಾವನಾತ್ಮಕ ವ್ಯಕ್ತಿ. ದಯೆ ತೋರಿಸುವುದನ್ನ ಕೆಲವರು ಫೇಕ್ ಅಥವಾ ದೌರ್ಬಲ್ಯ ಎಂದು ನೋಡುತ್ತಾರೆ. ಆದರೆ ನಿಜವಾದ ದಯೆ ತೋರಿಸಲು ಸಾಧ್ಯವಿಲ್ಲದಿದ್ದರೆ, ಮೌನವಾಗಿರುವುದು ಉತ್ತಮ. ಎಲ್ಲರಿಗೂ ಬೆಳೆಯಲು ಜಾಗವಿದೆ, ಆದರೆ ಕೆಲವರು ಏಕೆ ತಡೆಯುತ್ತಾರೆ ಎಂಬುದು ಅರ್ಥವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ರಶ್ಮಿಕಾ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಅಡೆತಡೆಗಳನ್ನು ಎದುರಿಸಿದರೂ, ಈಗ ಬೇಡಿಕೆಯ ನಟಿಯಾಗಿ ಹಲವಾರು ದೊಡ್ಡ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕುಬೇರ ಸಿನಿಮಾ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಗರ್ಲ್‌ಫ್ರೆಂಡ್ ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.