ಅಪ್ಪು ಅಗಲಿಕೆ 3ನೇ ವರ್ಷದ ಪುಣ್ಯಸ್ಮರಣೆ ರಾಜ್ಯಾದ್ಯಂತ ಅಭಿಮಾನಿಗಳಿಂದ ನಮನ


ಅಪ್ಪು ಅಗಲಿಕೆ 3ನೇ ವರ್ಷದ ಪುಣ್ಯಸ್ಮರಣೆ ರಾಜ್ಯಾದ್ಯಂತ ಅಭಿಮಾನಿಗಳಿಂದ ನಮನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆ ಇಂದಿಗೆ 3 ವರ್ಷ. ಕರ್ನಾಟಕದ ಜನತೆಗೆ ಅಪ್ಪು ಎಂದೇ ಪ್ರೀತಿಯ ಪಾತ್ರರಾಗಿದ್ದ ಪುನೀತ್, ನೂರು ವರ್ಷಗಳಾದರೂ ಮರೆಯಲಾಗದ ಮಾಣಿಕ್ಯ. ಅವರ 3ನೇ ಪುಣ್ಯಸ್ಮರಣೆಯಲ್ಲಿ ಪತ್ನಿ ಅಶ್ವಿನಿ, ಕುಟುಂಬಸ್ಥರು, ಹಾಗೂ ರಾಜ್ಯದ ಮೂಲೆಗಳಿಂದ ಆಗಮಿಸಿದ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿದರು.
ಸಮಾಧಿ ಹೂವು, ದೀಪಗಳಿಂದ ಅಲಂಕಾರಗೊಂಡಿದ್ದು, ಅಭಿಮಾನಿಗಳು ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು. ಪುಣ್ಯಸ್ಮರಣೆ ಅಂಗವಾಗಿ ರಾಜ್ಯದ ವಿವಿಧೆಡೆ ಅನ್ನದಾನ, ರಕ್ತದಾನ ಶಿಬಿರಗಳೂ ಆಯೋಜನೆಗೊಂಡಿದ್ದು, ಅಪ್ಪು ಸ್ಮರಣೆಯೇ ಅಭಿಮಾನಿಗಳಿಗೆ ಪುಣ್ಯದ ಮಾರ್ಗವಾಗಿದೆ.