Back to Top

ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ

SSTV Profile Logo SStv October 22, 2024
ಪತ್ರ ಬರೆದ ಸುದೀಪ್ ಪುತ್ರಿ
ಪತ್ರ ಬರೆದ ಸುದೀಪ್ ಪುತ್ರಿ
ಅಜ್ಜಿಯ ನೆನೆದು ಭಾವನಾತ್ಮಕ ಪತ್ರ ಬರೆದ ಸುದೀಪ್ ಪುತ್ರಿ ನಟ ಸುದೀಪ್ ಅವರ ಮನೆಯಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ತಾಯಿಯ ನಿಧನದಿಂದ ಸುದೀಪ್ ಆಘಾತಗೊಂಡಿದ್ದಾರೆ. ಇತ್ತ ಅಜ್ಜಿಯ ನೆನಪಿನಲ್ಲಿ ಸಾನ್ವಿ ಸುದೀಪ್ ಭಾವುಕವಾಗಿ ಪತ್ರವೊಂದನ್ನು ಬರೆದುಕೊಂಡಿದ್ದಾರೆ.ನಿಮ್ಮ ಮೆಸೇಜ್‌ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನಿಮ್ಮ ಅಡುಗೆಯನ್ನು ಮಿಸ್ ಮಾಡಿಕೊಳ್ತಿದ್ದೇನೆ, ನಾನು ಹೊರಗೆ ಹೋದಾಗ ನೀವು ನನಗಾಗಿ ಕಾಯೋದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವುದನ್ನು ಕಳೆದುಕೊಂಡಿದ್ದೇನೆ. ನೀವು ನನಗೆ ಕಚಗುಳಿ ಮಾಡೋದನ್ನು ಕಳೆದುಕೊಂಡಿದ್ದೇನೆ, ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಕಳೆದುಕೊಂಡಿದ್ದೇನೆ ಎಂದು ಸುದೀಪ್ ಪುತ್ರಿ ಅಜ್ಜಿಯ ಕುರಿತು ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದಾರೆ.ಅಂದಹಾಗೆ, ಅನಾರೋಗ್ಯದಿಂದ ಸುದೀಪ್ ತಾಯಿ ಸರೋಜಾ ಬಳಲುತ್ತಿದ್ದರು. ಅ.20ರಂದು ಅವರು ಇಹಲೋಕ ತ್ಯಜಿಸಿದರು. ಅದೇ ದಿನ ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸರೋಜಾ ಅವರ ಅಂತ್ಯಕ್ರಿಯೆ ನಡೆಯಿತು.