"ನೀವು ನಿಜವಾದ ಭಾರತೀಯ ನಾರಿ" – ಅನುಪಮಾ ಗೌಡ ಫೋಟೋಗಳಿಗೆ ಅಭಿಮಾನಿಗಳ ಮೆಚ್ಚುಗೆ!


ಕನ್ನಡದ ಬಿಗ್‌ಬಾಸ್ ಖ್ಯಾತಿಯ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಇತ್ತೀಚೆಗೆ ತಮ್ಮ ಹೊಸ ಫೋಟೋಶೂಟ್ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ಹಸಿರು ಬಣ್ಣದ ಸೀರೆ, ಗುಲಾಬಿ ಬಣ್ಣದ ಬ್ಲೌಸ್, ಕೈಯಲ್ಲಿ ಹಸಿರು ಬಳೆ ಮತ್ತು ಹಣೆಗೆ ಸ್ಟೀಕರ್ ಧರಿಸಿಕೊಂಡು ಮಿಂಚುತ್ತಿರುವ ಅನುಪಮಾ, ನಗುಮುಖದ ಚೆಲುವಿನಿಂದ ಫ್ಯಾನ್ಸ್ ಮನಸೆಳೆಯುತ್ತಿದ್ದಾರೆ.
ಸದ್ಯ ಕ್ವಾಟ್ಲೆ ಕಿಚನ್ ಶೋ ನಿರೂಪಣೆಯಲ್ಲಿ ಬ್ಯುಸಿಯಾಗಿರುವ ಅನುಪಮಾ, ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಶೇರ್ ಮಾಡಿಕೊಂಡ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು "ನೀವು ನಿಜವಾದ ಭಾರತೀಯ ನಾರಿ", "ನಿಮ್ಮ ಸೌಂದರ್ಯಕ್ಕೆ ದೃಷ್ಟಿ ತಗುಲ್ಬೇಕು" ಎಂದು ಮೆಚ್ಚುಗೆ ಸುರಿಸುತ್ತಿದ್ದಾರೆ.
ಅಕ್ಕ ಧಾರಾವಾಹಿಯಿಂದ ಮನೆಮಾತಾದ ಅನುಪಮಾ, ನಂತರ ಬಿಗ್‌ಬಾಸ್ ಸೀಸನ್ 5 ಮತ್ತು 9ರಲ್ಲಿ ಕಾಣಿಸಿಕೊಂಡು ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದರು. ಈಗ ಮತ್ತೆ ತಮ್ಮ ಸೊಗಸಾದ ಲುಕ್ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.