ನಟ ದರ್ಶನ್ ಜೈಲು ಬಳಿ ‘ಡೆವಿಲ್’ ಅವತಾರ – ಎಕ್ಸ್‌ಕ್ಲೂಸಿವ್ ಫೋಟೋ ವೈರಲ್!


ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಟ ದರ್ಶನ್ ಹಾಗೂ ಇನ್ನೂ 6 ಜನರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಹೈಕೋರ್ಟ್ ನೀಡಿದ್ದ ಜಾಮೀನು ವಿರುದ್ಧ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ, ವಾದ-ಪ್ರತಿವಾದಗಳ ಬಳಿಕ ತೀರ್ಪು ನೀಡಲಾಗಿದೆ.
ತೀರ್ಪಿನ ಬೆನ್ನಲ್ಲೇ, ಪೊಲೀಸರು ದರ್ಶನ್‌ನನ್ನು ಅವನ ಮನೆಯಿಂದಲೇ ಅರೆಸ್ಟ್ ಮಾಡಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಮೆಡಿಕಲ್ ಪರೀಕ್ಷೆಗೆ ಒಳಪಡಿಸಿದ ವೇಳೆ, ಕ್ಯಾಪ್ ಧರಿಸಿ ಹೊರಟ ದರ್ಶನ್‌ನ ಒಂದು ಎಕ್ಸ್‌ಕ್ಲೂಸಿವ್ ಫೋಟೋ ಜೈಲು ಬಳಿ ಕ್ಯಾಮೆರಾಗಳಲ್ಲಿ ಸೆರೆ ಸಿಕ್ಕಿದೆ.
ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿ, ಅಭಿಮಾನಿಗಳ ಹಾಗೂ ಜನರ ನಡುವೆ ಚರ್ಚೆಗೆ ಕಾರಣವಾಗಿದೆ.