ಸಹಿಸಲಾಗದ ನೋವಿನಿಂದ ಆಸ್ಪತ್ರೆಗೆ ಬಂದ ದರ್ಶನ್ ಮುಗಿಬಿದ್ದ ಅಭಿಮಾನಿಗಳು


ಸಹಿಸಲಾಗದ ನೋವಿನಿಂದ ಆಸ್ಪತ್ರೆಗೆ ಬಂದ ದರ್ಶನ್ ಮುಗಿಬಿದ್ದ ಅಭಿಮಾನಿಗಳು ದರ್ಶನ್ ಅವರಿಗೆ ಬೆನ್ನು ನೋವು ವಿಪರೀತ ಆಗಿದೆ.ಹಾಗಾಗಿ ಎಂಆರ್ಐ ಸ್ಕ್ಯಾನಿಂಗ್ ಮಾಡುವ ಸಲುವಾಗಿ ಅವರನ್ನು ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಈ ವೇಳೆ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ‘ಜೈ ಡಿ ಬಾಸ್’ ಎಂದು ಫ್ಯಾನ್ಸ್ ಜೈಕಾರ ಹಾಕಿದ್ದಾರೆ. ಅಭಿಮಾನಿಗಳ ಗದ್ದಲದ ನಡುವೆಯೇ ದರ್ಶನ್ ಅವರನ್ನು ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗಲಾಯಿತು.ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಬೆನ್ನು ನೋವು ಹೆಚ್ಚಾಗಿದೆ. ಅವರ ಮುಖಭಾವದಲ್ಲೇ ನೋವಿನ ತೀವ್ರತೆ ಗೊತ್ತಾಗುತ್ತಿದೆ. ಬಳ್ಳಾರಿ ಜೈಲಿನಲ್ಲಿ ಇರುವ ಅವರನ್ನು ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡ ಬಂದು ಹೆಚ್ಚಿನ ತಪಾಸಣೆ ಮಾಡಿಸಲಾಗಿದೆ.ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ದರ್ಶನ್ ಅವರ ತಪಾಸಣೆ ಮಾಡಿದ್ದಾರೆ.ಬಳಿಕ ದರ್ಶನ್ ಅವರನ್ನು ವಾಪಸ್ ಬಳ್ಳಾರಿ ಜೈಲಿಗೆ ಕರೆದುಕೊಂಡು ಬರಲಾಗಿದೆ.