ಮಾಳವಿಕಾ ಮೋಹನನ್ ಹೇಳಿಕೆ ಚರ್ಚೆಗೆ ಕಾರಣ! ದಕ್ಷಿಣ ಚಿತ್ರರಂಗದಲ್ಲಿ ‘ಹೊಕ್ಕಳದ ಗೀಳು’ ಎಂದು ಟೀಕೆ


ಚರ್ಚಿತ ನಟಿ ಮಾಳವಿಕಾ ಮೋಹನನ್, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಹಿಳೆಯರ ದೇಹದ ಮೇಲೆ ಹೆಚ್ಚು ಗಮನ ನೀಡಲಾಗುತ್ತದೆ ಎಂಬ ಹೇಳಿಕೆ ನೀಡಿ ಸಂಚಲನ ಉಂಟುಮಾಡಿದ್ದಾರೆ. ಮಲಯಾಳಂ ಚಿತ್ರರಂಗದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಅವರು, ನಂತರ ಕನ್ನಡ, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾಳವಿಕಾ, "ಮುಂಬೈನಲ್ಲಿ ತೂಕ ಕಡಿಮೆ ಮಾಡಬೇಕು ಎನ್ನುತ್ತಾರೆ. ಆದರೆ ಚೆನ್ನೈನಲ್ಲಿ ತೂಕ ಹೆಚ್ಚಿಸಬೇಕೆಂದು ಸಲಹೆ ನೀಡುತ್ತಾರೆ. ಇದರಿಂದ ನಾನು ಗೊಂದಲಕ್ಕೆ ಒಳಗಾದೆ," ಎಂದು ಹೇಳಿದ್ದಾರೆ.
ಅವರು ಮುಂದಾಗಿ, "ದಕ್ಷಿಣ ಭಾರತದ ಜನರು ನಟಿಯರ ಫೋಟೋದಲ್ಲಿ ಹೊಕ್ಕಳದ ಭಾಗವನ್ನು ಜೂಮ್ ಮಾಡಿ ನೋಡುವ ಗೀಳಿದ್ದಾರೆ. ನಾನು ಮುಂಬೈನಲ್ಲಿ ಬೆಳೆದ ಕಾರಣ ಇದು ನನಗೆ ಶಾಕ್ ನೀಡಿತು," ಎಂದು ತಿಳಿಸಿದ್ದಾರೆ.
ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮಾಳವಿಕಾರ ಮಾತುಗಳಿಗೆ ಬೆಂಬಲ ನೀಡಿದರೆ, ಇನ್ನು ಕೆಲವರು ಅವರಿಗೆ ಟೀಕೆ ನೀಡಿದ್ದಾರೆ. ಪ್ರಸ್ತುತ ಮಾಳವಿಕಾ ಮೋಹನನ್ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಾಜೆಕ್ಟ್‌ಗಳಲ್ಲಿ ನಿರತರಾಗಿದ್ದಾರೆ.