ಮಾಲ್ಡೀವ್ಸ್ ಕಡಲತೀರದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ – ಫೋಟೋ ವೈರಲ್


ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಾಲ್ಡೀವ್ಸ್‌ನ ಕಡಲತೀರದಲ್ಲಿ ನಿಂತುಕೊಂಡು ಪೋಸ್ ನೀಡಿದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಸೂರ್ಯ, ಸಮುದ್ರ ಹಾಗೂ ನಾನು” ಎಂಬ ಕ್ಯಾಪ್ಷನ್ ಜೊತೆ ಶೇರ್ ಮಾಡಿದ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ತಿಳಿ ನೀಲಿ ಶರ್ಟ್ ಮತ್ತು ಕಪ್ಪು ಲೂಸ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡ ವಿಜಯಲಕ್ಷ್ಮಿ, ಆಗಾಗ ಪತಿ ದರ್ಶನ್, ಮಗ ವಿನೀಶ್ ಹಾಗೂ ತಮ್ಮ ಮುದ್ದಿನ ನಾಯಿಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ಸಮುದ್ರ ತೀರದ ಸೌಂದರ್ಯ ಮತ್ತು ತಮ್ಮ ಸ್ಟೈಲಿಷ್ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.