Back to Top

ಯಕ್ಷಗಾನ ಕಾನ್ಸೆಪ್ಟ್‌ನ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಸುಶ್ಮಿತಾ; ಈಗ ಸೀಮಂತ ಸಂಭ್ರಮ, ಇಲ್ಲಿವೆ ವೈರಲ್ ಫೋಟೋಸ್!

SSTV Profile Logo SStv August 12, 2025
ಲವ್ ಮಾಕ್ಟೇಲ್ 2 ನಟಿ ಸುಶ್ಮಿತಾಗೆ ಅದ್ಧೂರಿ ಸೀಮಂತ ಸಂಭ್ರಮ
ಲವ್ ಮಾಕ್ಟೇಲ್ 2 ನಟಿ ಸುಶ್ಮಿತಾಗೆ ಅದ್ಧೂರಿ ಸೀಮಂತ ಸಂಭ್ರಮ

ಕನ್ನಡ ಚಿತ್ರರಂಗದಲ್ಲಿ ಲವ್ ಮಾಕ್ಟೇಲ್ 2 ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಟಿ ಸುಶ್ಮಿತಾ ಗೌಡ ಅವರ ಜೀವನದಲ್ಲಿ ಈಗ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ಸ್ಟಾರ್ ನಟಿಗೆ, ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಲಾಯಿತು.

ಸುಶ್ಮಿತಾ ಗೌಡ ಅವರು ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಜಂಕಿ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದರು. ತಾಯಿಯಾಗುತ್ತಿರುವ ಸಂತಸದಲ್ಲಿರುವ ಅವರು, ಈ ವಿಶೇಷ ಕ್ಷಣವನ್ನು ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ಸೀರಿಯಲ್ಲಿ ಅವರು ಕಂಗೊಳಿಸಿದ್ದು, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಸಂದರ್ಭದಲ್ಲಿ ನಿರೂಪಕಿ ಅನುಪಮಾ ಗೌಡ ಕೂಡ ಭಾಗವಹಿಸಿ ಸಂತೋಷ ಹಂಚಿಕೊಂಡಿದ್ದಾರೆ. ವಿಶೇಷ ಅಲಂಕಾರ, ಸಂಪ್ರದಾಯದ ಶಾಸ್ತ್ರ, ಹಾಸ್ಯ-ಹುಚ್ಚಾಟ ಎಲ್ಲಾ ಸೇರಿ ಕಾರ್ಯಕ್ರಮಕ್ಕೆ ಸಡಗರ ತುಂಬಿತ್ತು. ಇದಕ್ಕೂ ಮೊದಲು, ಪತಿ ಅಶ್ವಿನ್ ಜೊತೆ ಯಕ್ಷಗಾನ ಕಾನ್ಸೆಪ್ಟ್‌ನೊಂದಿಗೆ ತಮ್ಮ ಗರ್ಭಧಾರಣೆಯ ವಿಚಾರವನ್ನು ಸೃಜನಾತ್ಮಕವಾಗಿ ಅನೌನ್ಸ್ ಮಾಡಿದ್ದರು. 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಕೆಲವು ವರ್ಷ ವಿದೇಶದಲ್ಲಿ ನೆಲೆಸಿದ ನಂತರ ಇದೀಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಸುಶ್ಮಿತಾ, ಸಿನಿಮಾಗಳಿಂದ ದೂರವಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಸಕ್ರಿಯರಾಗಿದ್ದಾರೆ. ಅಭಿಮಾನಿಗಳು ಅವರ ಈ ಹೊಸ ಜೀವನಪಯಣಕ್ಕೆ ಹಾರೈಸುತ್ತಿದ್ದು, ತಾಯಿತನದ ಹೆಜ್ಜೆಯಲ್ಲಿ ಅನೇಕ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ. "ಜಂಕಿಯಿಂದ ಜರ್ನಿ ಈಗ ತಾಯಿಯ ಪಾತ್ರ" ಎಂಬಂತೆ, ಸುಶ್ಮಿತಾ ಗೌಡ ಅವರ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ.