ಕಿರಣ್ ರಾಜ್ ಹೊಸ ಸಿನಿಮಾ ‘ಮೇಘ’ ಶೀಘ್ರ ಬಿಡುಗಡೆಗೆ ಸಿದ್ಧ ಕಿರುತೆರೆಯಲ್ಲಿ ಪ್ರಸಿದ್ಧರಾಗಿರುವ ನಟ ಕಿರಣ್ ರಾಜ್


ಕಿರಣ್ ರಾಜ್ ಹೊಸ ಸಿನಿಮಾ ‘ಮೇಘ’ ಶೀಘ್ರ ಬಿಡುಗಡೆಗೆ ಸಿದ್ಧ ಕಿರುತೆರೆಯಲ್ಲಿ ಪ್ರಸಿದ್ಧರಾಗಿರುವ ನಟ ಕಿರಣ್ ರಾಜ್, ತಮ್ಮ ಹೊಸ ಸಿನಿಮಾ ‘ಮೇಘ’ ಮೂಲಕ ಬಿಗ್ ಸ್ಕ್ರೀನ್‌ನಲ್ಲಿ ಅಭಿಮಾನಿಗಳನ್ನು ಮೆಚ್ಚಿಸಲು ಸಿದ್ಧರಾಗಿದ್ದಾರೆ. ಈ ಚಿತ್ರದಲ್ಲಿ ಕಿರಣ್ ಅವರಿಗೆ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ನಿರ್ದೇಶಕ ಚರಣ್ ನಿರ್ದೇಶಿಸಿರುವ ‘ಮೇಘ’ ಸಿನಿಮಾದಲ್ಲಿ ನಿಜವಾದ ಸ್ನೇಹ ಮತ್ತು ಪ್ರೀತಿಯ ನಡುವಿನ ಸಣ್ಣ ವ್ಯತ್ಯಾಸವನ್ನು ಹಾಸ್ಯ ಮತ್ತು ಭಾವನೆಗಳ ಮೂಲಕ ಮನದಟ್ಟಾಗಿಸುತ್ತದೆ ಎಂದು ಚಿತ್ರತಂಡ ಹೇಳಿದೆ.
‘ಮೇಘ’ ಕ್ರಿಷಿ ಪ್ರೊಡಕ್ಷನ್ಸ್ ನಿರ್ಮಾಣದ ಮೊದಲ ಸಿನಿಮಾ ಆಗಿದ್ದು, ಇದು ಯತೀಶ್ ಹೆಚ್.ಆರ್., ಯತೀಶ್ ಆರ್.ಜಿ., ಮತ್ತು ರಮೇಶ್ ಎಚ್.ಎನ್ ಅವರ ಸಹಕಾರದಲ್ಲಿ ನಿರ್ಮಾಣವಾಗಿದೆ. ಜೊತೆಗೆ ರಾಜೇಶ್ ನಟರಂಗ ಹೀರೋ ತಂದೆಯ ಪಾತ್ರದಲ್ಲಿ, ಶೋಭರಾಜ್, ಸುಂದರ್ ವೀಣಾ, ಗಿರೀಶ್ ಶಿವಣ್ಣ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಸಂಗೀತವನ್ನು ಜೋಯಲ್ ಸಕ್ಕರಿ ಮತ್ತು ಫ್ರಾಂಕ್ಲಿನ್ ರಾಕಿ ನೀಡಿದ್ದಾರೆ. ವಿಶೇಷವಾಗಿ ವಿಜಯ್ ಪ್ರಕಾಶ್ ಮತ್ತು ವಾಸುಕಿ ವೈಭವ್ ಹಾಡಿರುವ ಹಾಡುಗಳು, ‘ಮೇಘ’ ಚಿತ್ರದ ಭಾವನಾತ್ಮಕತೆ ಹೆಚ್ಚಿಸುತ್ತವೆ. "ನಿನ್ನಲ್ಲಿ ನೀನು" ಹಾಡು ಈಗಾಗಲೇ ಯುಟ್ಯೂಬ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದೆ.
ಕಿರಣ್ ರಾಜ್ ಅವರ ಅಭಿಮಾನಿಗಳಿಗೆ ‘ಮೇಘ’ ಒಂದು ವಿಭಿನ್ನ ಅನುಭವ ನೀಡಲಿದ್ದು, ಈ ಕಥೆಯ ಒಗ್ಗರಣೆಯನ್ನು ಚಿತ್ರತಂಡ ಕಾತರದಿಂದ ಎದುರು ನೋಡುತ್ತಿದೆ.