Back to Top

‘ಕಾಂತಾರ’ ನಟಿ ರುಕ್ಮಿಣಿ ವಸಂತ್ ಹಂಚಿಕೊಂಡ ವಿಶೇಷ ವಿಡಿಯೋ ವೈರಲ್

SSTV Profile Logo SStv August 21, 2025
ಕೈಯ್ಯಾರೆ ಮಡಿಕೆ ಮಾಡಿದ ರುಕ್ಮಿಣಿ ವಸಂತ್
ಕೈಯ್ಯಾರೆ ಮಡಿಕೆ ಮಾಡಿದ ರುಕ್ಮಿಣಿ ವಸಂತ್

ಕನ್ನಡದ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿದ್ದಾರೆ. ಇದೀಗ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಒಂದು ಸರಳ ಆದರೆ ಅರ್ಥಪೂರ್ಣ ವೀಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ವೀಡಿಯೋದಲ್ಲಿ ರುಕ್ಮಿಣಿ ತಾವೇ ಮಣ್ಣಿನಿಂದ ಕೈಯಾರೆ ಮಡಿಕೆ ತಯಾರಿಸುತ್ತಿರುವುದನ್ನು ಕಾಣಬಹುದು. ಮಣ್ಣು ಹಿಡಿದು ಅಚ್ಚಿನಲ್ಲಿ ಹಾಕಿ, ಅದಕ್ಕೆ ಹಾರ್ಟ್ ಶೇಪ್ ನೀಡಿರುವ ಅವರು ಕೊನೆಗೆ ಸುಂದರವಾದ ಬೌಲ್ ಸಿದ್ಧಪಡಿಸಿದ್ದಾರೆ.

ಈ ಪೋಸ್ಟ್‌ಗೆ ಅವರು ನೀಡಿದ ಕ್ಯಾಪ್ಷನ್ ವಿಶೇಷವಾಗಿತ್ತು “ನಿಧಾನವಾಗಿ ಸಿಗುವ ಹರ್ಷ ಹೀಗೆ ಸುಂದರವಾಗಿ ಇರುತ್ತದೆ ಅಲ್ಲವೇ?” ಎಂದು ಬರೆದು ತಮ್ಮ ಜೀವನ ತತ್ವವನ್ನೇ ಹಂಚಿಕೊಂಡಂತೆ ಕಂಡರು.

ಪ್ರಸ್ತುತ ರುಕ್ಮಿಣಿ ‘ಕಾಂತಾರ 1’ ಚಿತ್ರದಲ್ಲೂ ನಟಿಸಿದ್ದಾರೆ. ಜೊತೆಗೆ ‘ಟಾಕ್ಸಿಕ್’ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಸರಳತೆಯಿಂದ ಕೂಡಿದ ಇಂತಹ ಪೋಸ್ಟ್‌ಗಳ ಮೂಲಕವೂ ಜನಪ್ರಿಯತೆಯನ್ನು ಗಳಿಸುತ್ತಿರುವ ರುಕ್ಮಿಣಿ, ನಿಜಕ್ಕೂ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.