Back to Top

ಹಲಗಲಿ ಪ್ರೆಸ್ ಮೀಟ್‌ನಲ್ಲಿ ಮಿಂಚಿದ ಸಪ್ತಮಿ ಗೌಡ – ಸುಂದರ ಲೆಹೆಂಗಾದಲ್ಲಿ ಕಂಗೊಳಿಸಿದ ಕಾಂತಾರ ಬೆಡಗಿ!

SSTV Profile Logo SStv August 18, 2025
ಹಲಗಲಿ ಪ್ರೆಸ್ ಮೀಟ್‌ನಲ್ಲಿ ಮಿಂಚಿದ ಸಪ್ತಮಿ ಗೌಡ
ಹಲಗಲಿ ಪ್ರೆಸ್ ಮೀಟ್‌ನಲ್ಲಿ ಮಿಂಚಿದ ಸಪ್ತಮಿ ಗೌಡ

ಸ್ಯಾಂಡಲ್‌ವುಡ್‌ನ ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ ಸಪ್ತಮಿ ಗೌಡ, ಇದೀಗ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೇನುಂದರೆ, ಡಾಲಿ ಧನಂಜಯ್ ನಟನೆಯ ಹಲಗಲಿ. ಈ ಚಿತ್ರದ ಪ್ರೆಸ್ ಮೀಟ್‌ನಲ್ಲಿ ಸಪ್ತಮಿ ಗೌಡ ತಮ್ಮ ಅದ್ಭುತ ಲುಕ್ ಮೂಲಕ ಎಲ್ಲರ ಕಣ್ಣು ಸೆಳೆದರು. ಹಲಗಲಿ ಚಿತ್ರವು ಸ್ವಾತಂತ್ರ್ಯ ಪೂರ್ವದ ಒಂದು ರೋಚಕ ಕಥೆಯನ್ನು ಆಧರಿಸಿಕೊಂಡಿದೆ. ಬೇಡರ ಸಮುದಾಯದ ಹೋರಾಟ, ಬದುಕು, ಹಾಗೂ ಅದರಿಂದ ಉದ್ಭವಿಸಿದ ಘಟನೆಗಳ ಸರಣಿಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ.

ಚಿತ್ರದಲ್ಲಿ ಸಪ್ತಮಿ ಗೌಡ ಧನಂಜಯ್ ಅವರ ಜೊತೆಯಾಗಿ ನಟಿಸುತ್ತಿದ್ದು, ಇವರ ಜೋಡಿ ಈಗಾಗಲೇ ಕುತೂಹಲ ಕೆರಳಿಸಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಸಪ್ತಮಿ ಗೌಡ ಅಂದವಾದ ಲೆಹೆಂಗಾ ತೊಟ್ಟು ಹಾಜರಾಗಿದ್ದರು. ವೇದಿಕೆಯ ಮೇಲಿನ ಅವರ ಹಾಜರಾತಿ ಪ್ರೇಕ್ಷಕರ ಗಮನ ಸೆಳೆಯಿತು. ಸುಂದರ ಡಿಸೈನ್‌ನ ಲೆಹೆಂಗಾ, ಅದ್ಭುತ ಕಲರ್ ಕಾಂಬಿನೇಶನ್, ಸೊಗಸಾದ ಸ್ಮೈಲ್ ಮತ್ತು ಪರ್ಫೆಕ್ಟ್ ಪೋಸ್‌ಗಳು ಎಲ್ಲವನ್ನೂ ಸೇರಿಸಿ ಸಪ್ತಮಿಯ ಲುಕ್ “ಹೈಲೈಟ್ ಆಫ್ ದ ಈವೆಂಟ್” ಆಗಿ ಹೊರಹೊಮ್ಮಿತು.

ಪ್ರೆಸ್ ಮೀಟ್ ಮುಂಚೆ ಸಪ್ತಮಿ ಗೌಡ ಲೆಹೆಂಗಾದಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳ ಲೊಕೇಶನ್ ನೋಡಿದರೆ ಅದು ಹಲಗಲಿ ಚಿತ್ರದ ಸೆಟ್‌ನಲ್ಲಿಯೇ ತೆಗೆದಿರಬಹುದು ಅನ್ನುವ ಭಾವ ಮೂಡುತ್ತದೆ. ಪ್ರತಿಯೊಂದು ಪೋಸ್‌ನಲ್ಲಿ ಲೆಹೆಂಗಾ ಹೈಲೈಟ್ ಆಗುವಂತೆ ಪ್ಲಾನ್ ಮಾಡಿದ್ದರು. ಸಪ್ತಮಿಯ ನೈಸರ್ಗಿಕ ಅಭಿವ್ಯಕ್ತಿಗಳು ಫೋಟೋಶೂಟ್‌ಗೆ ಹೆಚ್ಚುವರಿ ಆಕರ್ಷಣೆ ನೀಡಿದೆ.

ಈ ಹಿಂದೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಸಪ್ತಮಿ ಗೌಡ ಮತ್ತು ಧನಂಜಯ್ ಒಟ್ಟಿಗೆ ನಟಿಸಿದ್ದರು. ಅದೇ ಅವರ ಮೊದಲ ಸಿನಿಮಾ. ಅದರ ನಂತರ ಕಾಂತಾರ ಮೂಲಕ ಅವರು ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡರು. ಈಗ ಮತ್ತೆ ಧನಂಜಯ್ ಜೊತೆ ಹಲಗಲಿ ಮೂಲಕ ಜೋಡಿಯಾಗುತ್ತಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಸಿನಿಮಾವನ್ನು ನಿರ್ದೇಶಕ ಸೂಕೇಶ್ ಡಿ ಕೆ ನಿರ್ದೇಶಿಸುತ್ತಿದ್ದು, ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರವನ್ನು ಎರಡು ಭಾಗಗಳಲ್ಲಿ ತೆರೆಗೆ ತರುವ ಯೋಜನೆ ಇರುವುದು ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ.

ಪ್ರೆಸ್ ಮೀಟ್‌ನಲ್ಲಿ ಸಪ್ತಮಿ ಗೌಡ ಮಿಂಚಿದ ಲುಕ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ತಂದಿದೆ.