ಯಶ್ – ರಾಧಿಕಾ ಪಂಡಿತ್ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ


ಈ ವರ್ಷದ ವರಮಹಾಲಕ್ಷ್ಮಿ ಹಬ್ಬವನ್ನು ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮನೆಯಲ್ಲಿ ಭರ್ಜರಿಯಾಗಿ ಆಚರಿಸಿದರು. ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಬ್ಬದ ಫೋಟೋಗಳನ್ನು ಹಂಚಿಕೊಂಡು, “ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬ ಸುಖ, ಸಮೃದ್ಧಿ ತರಲಿ” ಎಂದು ಶುಭಕೋರಿದರು.
ಯಶ್, ಸಿನಿಮಾ ಕಾರ್ಯಗಳಲ್ಲಿ ಬ್ಯುಸಿ ಇದ್ದರೂ ಕುಟುಂಬಕ್ಕೆ ಸಮಯ ನೀಡುವ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ, ಪತ್ನಿ ಮತ್ತು ಮಕ್ಕಳೊಂದಿಗೆ ಹಬ್ಬವನ್ನು ಸಂಭ್ರಮಿಸಿದರು. ಹಬ್ಬಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ರಾಧಿಕಾ, ಪ್ರತೀ ವರ್ಷವೂ ಸಂಭ್ರಮದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
ಪ್ರಸ್ತುತ ಯಶ್ ಟಾಕ್ಸಿಕ್ ಮತ್ತು ರಾಮಾಯಣ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ರಾಧಿಕಾ ಕುಟುಂಬ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.