Back to Top

ಸುದೀಪ್ ಮಾತಿನಿಂದ ಮತ್ತಷ್ಟು ಗೊಂದಲಕ್ಕೆ ಸಿಲುಕಿದ ಭವ್ಯಾ ಗೌಡ

SSTV Profile Logo SStv October 21, 2024
ಗೊಂದಲಕ್ಕೆ ಸಿಲುಕಿದ ಭವ್ಯಾ ಗೌಡ
ಗೊಂದಲಕ್ಕೆ ಸಿಲುಕಿದ ಭವ್ಯಾ ಗೌಡ
ಸುದೀಪ್ ಮಾತಿನಿಂದ ಮತ್ತಷ್ಟು ಗೊಂದಲಕ್ಕೆ ಸಿಲುಕಿದ ಭವ್ಯಾ ಗೌಡ ಭವ್ಯಾ ಗೌಡ ಅವರು ಕೂಡ ತಳ್ಳಿದವರಲ್ಲಿ ಒಬ್ಬರು. ಸುದೀಪ್ ಅವರು ವೀಕೆಂಡ್​ನಲ್ಲಿ ಈ ವಿಚಾರವನ್ನು ಮಾತನಾಡಿದ್ದಾರೆ. ಭವ್ಯಾ ಅವರಿಗೆ ನೀತಿ ಪಾಠ ಹೇಳಿದ್ದಾರೆ. ಇದರಿಂದ ಅವರು ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.ಸುದೀಪ್ ಅವರು ಕಳೆದ ವಾರ ಬಿಗ್ ಬಾಸ್​ನಲ್ಲಿ ಭರ್ಜರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ಭವ್ಯಾ ಗೌಡ ಅವರಿಗೂ ಪಾಠ ಹೇಳಿದ್ದಾರೆ. ಎಪಿಸೋಡ್ ಮುಗಿಯುತ್ತಿದ್ದಂತೆ ಭವ್ಯಾ ಗೌಡ ಅವರು ಸಾಕಷ್ಟು ಗೊಂದಲಕ್ಕೆ ಒಳಗಾದರು.ಭವ್ಯಾ ಗೌಡ ಅವರು ಕೂಡ ತಳ್ಳಿದವರಲ್ಲಿ ಒಬ್ಬರು. ಸುದೀಪ್ ಅವರು ವೀಕೆಂಡ್​ನಲ್ಲಿ ಈ ವಿಚಾರವನ್ನು ಮಾತನಾಡಿದ್ದಾರೆ. ಭವ್ಯಾ ಅವರಿಗೆ ನೀತಿ ಪಾಠ ಹೇಳಿದ್ದಾರೆ. ಇದರಿಂದ ಅವರು ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.‘ತುಂಬಾ ಕಷ್ಟಪಟ್ಟು ಹೆಸರು ಮಾಡಿದ್ದೀರಿ. ಅಗತ್ಯ ಇದ್ದಾಗ ಮಾತನಾಡಿ. ಆದರೆ, ನಿಮಗೆ ಚೌಕಟ್ಟು ಹಾಕಿಕೊಳ್ಳಿ’ ಎಂದು ಭವ್ಯಾ ಗೌಡ ಅವರಿಗೆ ಸುದೀಪ್ ಅವರು ಕಿವಿಮಾತು ಹೇಳಿದ್ದಾರೆ.‘ನನಗೆ ಹೇಗಿರಬೇಕು ಎಂದು ಗೊತ್ತಾಗುತ್ತಿಲ್ಲ. ಪರಿಸ್ಥಿತಿ ಹೇಗೇಗೋ ಮಾಡಿಸುತ್ತಿದೆ. ಮೆಂಟಲಿ ಸ್ಟ್ರೆಸ್ ಎನಿಸುತ್ತಿದೆ. ನನಗೆ ಗೊಂದಲ ಹುಟ್ಟುತ್ತಿದೆ. ಹೇಗೆ ಮಾತನಾಡಬೇಕು ಗೊತ್ತಾಗುತ್ತಿಲ್ಲ’ ಎಂದಿದ್ದಾರೆ ಭವ್ಯಾ ಗೌಡ.‘ಲೆಕ್ಕಾಚಾರ ಮಾಡಿಕೊಂಡಾಗ ಎಲ್ಲವೂ ಸರಿ ಆಗುತ್ತಿತ್ತು. ಆದರೆ, ಈ ಬಾರಿ ಲೆಕ್ಕಾಚಾರ ಮಾಡದೆ ಆಡಿದ್ದಕ್ಕೆ ಈ ರೀತಿ ಆಗಿರೋದು ಎಂದು ಭವ್ಯಾ ಗೌಡ ಅವರು ಹೇಳಿದ್ದಾರೆ.