Back to Top

ಈ ಸಿನಿಮಾದಿಂದ ಎಷ್ಟು ಹಣ ಬರುತ್ತದೆ ಎಂದು ರಾಧಿಕಾ ಎಂದಿಗೂ ಕೇಳಿಲ್ಲ ಯಶ್

SSTV Profile Logo SStv October 23, 2024
ಈ ಸಿನಿಮಾದಿಂದ ಎಷ್ಟು ಹಣ ಬರುತ್ತದೆ
ಈ ಸಿನಿಮಾದಿಂದ ಎಷ್ಟು ಹಣ ಬರುತ್ತದೆ
ಈ ಸಿನಿಮಾದಿಂದ ಎಷ್ಟು ಹಣ ಬರುತ್ತದೆ ಎಂದು ರಾಧಿಕಾ ಎಂದಿಗೂ ಕೇಳಿಲ್ಲ ಯಶ್ ಅಭಿನಯ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಎಲ್ಲರಿಗೂ ಮಾದರಿ ದಂಪತಿ. 'ದಿ ಹಾಲಿವುಡ್​ ರಿಪೋರ್ಟರ್​ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಯಶ್ ಪತ್ನಿ ರಾಧಿಕಾ ಬಗ್ಗೆ ಮಾತನಾಡಿದ್ದಾರೆ. “ರಾಧಿಕಾ ನನ್ನ ಶಕ್ತಿ. ಅವಳು ನನ್ನನ್ನು ಸದಾ ಬೆಂಬಲಿಸಿದ್ದಾಳೆ. ಈ ಚಿತ್ರದಿಂದ ಎಷ್ಟು ಹಣ ಸಿಗುತ್ತದೆ ಎಂದು ಎಂದಿಗೂ ಕೇಳಿಲ್ಲ. ಅವಳಿಗೆ ನನ್ನ ಖುಷಿಯೇ ಮುಖ್ಯ,” ಎಂದು ಯಶ್ ಹೇಳಿದರು. 2016ರ ಡಿಸೆಂಬರ್ 6ರಂದು ವಿವಾಹವಾದ ಈ ಜೋಡಿ, ಧಾರಾವಾಹಿಯಿಂದ ಆರಂಭಿಸಿ, ಹಿರಿತೆರೆಯಲ್ಲೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಜೋಡಿ ಮತ್ತೊಮ್ಮೆ ತೆರೆಹಂಚಿಕೊಳ್ಳಲಿ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.