"ಇದ್ರೆ ನೆಮ್ಮದಿಯಾಗ್ ಇರ್ಬೇಕು – ಡೆವಿಲ್ ಸಿನಿಮಾದ ಮೊದಲ ಸಾಂಗ್ ಅಭಿಮಾನಿಗಳಿಗೆ ಸರ್ಪ್ರೈಸ್"


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ "ಡೆವಿಲ್" ಚಿತ್ರದ ಮೊದಲ ಹಾಡು ಬಿಡುಗಡೆಯ ದಿನಾಂಕ ಈಗ ಅಧಿಕೃತವಾಗಿದೆ. “ಇದ್ರೆ ನೆಮ್ಮದಿಯಾಗ್ ಇರ್ಬೇಕು” ಎನ್ನುವ ಈ ಸಾಂಗ್ ಆಗಸ್ಟ್ 24, ಭಾನುವಾರ ಬೆಳಗ್ಗೆ 10:05ಕ್ಕೆ ಬಿಡುಗಡೆಯಾಗಲಿದೆ.
ಆದ್ರೆ ಈ ಹಾಡು ಮೊದಲು ಆಗಸ್ಟ್ 15 ಸ್ವಾತಂತ್ರ್ಯ ದಿನದಂದೇ ಬಿಡುಗಡೆಯಾಗಬೇಕಾಗಿತ್ತು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ದರ್ಶನ್ ಮತ್ತೆ ಜೈಲಿಗೆ ತೆರಳಬೇಕಾದ ಕಾರಣ ಹಾಡಿನ ಬಿಡುಗಡೆ ಮುಂದೂಡಲ್ಪಟ್ಟಿತ್ತು.
ಮಿಲನಾ ಪ್ರಕಾಶ್ ನಿರ್ದೇಶನದ ಈ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದ್ದು, ಇದು ದರ್ಶನ್ ಅವರ 57ನೇ ಸಿನಿಮಾ. ರಚನಾ ರೈ ಹೀರೋಯಿನ್ ಆಗಿ ನಟಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಇದು ಖಂಡಿತಾ ದೊಡ್ಡ ಸರ್‌ಪ್ರೈಸ್ ಆಗಲಿದೆ.