ದರ್ಶನ್ ಪುತ್ರನಿಗೆ ದೀಪಾವಳಿ ಹಾಗೂ ಹುಟ್ಟುಹಬ್ಬದ ವಿಶೇಷ ಉಡುಗೊರೆ ತಂದೆಯ ಜೊತೆ ಸಂಭ್ರಮ


ದರ್ಶನ್ ಪುತ್ರನಿಗೆ ದೀಪಾವಳಿ ಹಾಗೂ ಹುಟ್ಟುಹಬ್ಬದ ವಿಶೇಷ ಉಡುಗೊರೆ ತಂದೆಯ ಜೊತೆ ಸಂಭ್ರಮ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿ ಇದ್ದ ನಟ ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನು ಸಿಕ್ಕಿದ್ದು, ಇದು ಕುಟುಂಬ ಹಾಗೂ ಅಭಿಮಾನಿಗಳಿಗೆ ದೀಪಾವಳಿ ಉಡುಗೊರೆಯಂತಾಗಿದೆ. ದರ್ಶನ್ ಪುತ್ರ ವಿನೀಶ್‌ಗೆ ಇದೊಂದು ಡಬಲ್ ಧಮಾಕದ ಸಂದರ್ಭ, ಅ.31ರಂದು ತಾಯಿ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸುವ ಅವಕಾಶ ಲಭಿಸಿದ್ದು, ತಂದೆಯ ಜೊತೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಲು ಸಾಧ್ಯವಾಗುತ್ತಿದೆ.
ದರ್ಶನ್ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಕಾಮಾಕ್ಯ ದೇವಿಗೆ ಧನ್ಯತೆ ಸಲ್ಲಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ "ಥ್ಯಾಂಕ್‌ಫುಲ್, ಗ್ರೇಟ್‌ಫುಲ್ " ಎಂದು ಸಂತಸ ಹಂಚಿಕೊಂಡಿದ್ದಾರೆ.