ಡೆವಿಲ್ ಸಿನಿಮಾ ಪ್ರಚಾರವನ್ನೇ ಕೈಗೆತ್ತಿಕೊಂಡ ದರ್ಶನ್ ಪತ್ನಿ ವಿಜಯಲಕ್ಷ್ಮಿ


ಕೊಲೆ ಪ್ರಕರಣದ ಆರೋಪದ ಮೇರೆಗೆ ಮೂರನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಇದೀಗ ಜೈಲಿನ ನಿಯಮಾನುಸಾರ ದಿನಗಳನ್ನು ಕಳೆಯುತ್ತಿದ್ದಾರೆ. ಸಹ ಕೈದಿಗಳ ಸಂಪರ್ಕವಿಲ್ಲದೆ, ನಾಲ್ಕು ಗೋಡೆಗಳ ಮಧ್ಯೆ ಹೆಚ್ಚು ಸಮಯ ಕಳೆದಿದ್ದಾರೆ.
ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪತಿಯ ಪರವಾಗಿ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ "ಡೆವಿಲ್" ಚಿತ್ರದ ಪ್ರಚಾರ ಕುರಿತ ಪೋಸ್ಟ್ ಹಂಚಿಕೊಂಡಿರುವ ಅವರು, ದಚ್ಚು ಅಭಿಮಾನಿಗಳಿಗೆ ಭರವಸೆ ತುಂಬುವ ಸಂದೇಶ ನೀಡಿದ್ದಾರೆ.
“ನಿಮ್ಮ ಚಾಲೆಂಜಿಂಗ್ ಸ್ಟಾರ್ ನಿಮ್ಮೆಲ್ಲರನ್ನು ತಮ್ಮ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ಅವರು ಹಿಂತಿರುಗುವವರೆಗೂ ಅವರ ಪರವಾಗಿ ನಾನು ಸೋಷಿಯಲ್ ಮೀಡಿಯಾ ನಿರ್ವಹಿಸುತ್ತೇನೆ. ನಿಮ್ಮ ಪ್ರೀತಿ, ಪ್ರಾರ್ಥನೆ, ತಾಳ್ಮೆ ನಮಗೆ ಅಪಾರ ಶಕ್ತಿಯಾಗಿದೆ. ಅದೇ ಏಕತೆ ಮತ್ತು ಸಕಾರಾತ್ಮಕತೆಯನ್ನು ಉಳಿಸೋಣ. ಅವರು ಶೀಘ್ರದಲ್ಲೇ ನಿಮ್ಮೆದುರು ಹಿಂತಿರುಗುತ್ತಾರೆ” ಎಂದು ವಿಜಯಲಕ್ಷ್ಮಿ ಬರೆದಿದ್ದಾರೆ.
ದಚ್ಚು ಅಭಿಮಾನಿಗಳ ಉತ್ಸಾಹ ಹಾಗೂ ಬೆಂಬಲವನ್ನು ಜೀವಂತವಾಗಿರಿಸಲು ವಿಜಯಲಕ್ಷ್ಮಿಯ ಈ ಸಂದೇಶ ಪ್ರಮುಖ ಪಾತ್ರ ವಹಿಸಿದೆ.