ದರ್ಶನ್ ಜೈಲು ಸೇರಿದ ಬಳಿಕ ವಿಜಯಲಕ್ಷ್ಮಿ ಮೊದಲ ಪೋಸ್ಟ್; ಅಭಿಮಾನಿಗಳ ಹೃದಯ ಒಡೆದ ಕ್ಷಣ!


ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸೇರಿದಂತೆ ಹಲವಾರು ಆರೋಪಗಳ ಬೆನ್ನಲ್ಲೇ ಅವರ ಬೇಲ್ ರದ್ದುಪಡಿಸಿ ಮತ್ತೆ ಸೆರೆಮನೆ ಸೇರಿಸಲಾಯಿತು. ಗಂಡನ ಪರ ನಿಂತು ಹೋರಾಡಿದ ಪತ್ನಿ ವಿಜಯಲಕ್ಷ್ಮಿಗೆ ಇದು ದೊಡ್ಡ ಆಘಾತ ತಂದಿದೆ.
ದರ್ಶನ್ ಸಂಕಷ್ಟದಲ್ಲಿ ಶಕ್ತಿ ದೇವತೆಗಳ ಮೊರೆ ಹೋಗಿದ್ದ ವಿಜಯಲಕ್ಷ್ಮಿ, ಅನೇಕ ಹರಕೆಗಳನ್ನು ಕಟ್ಟಿಕೊಂಡು ಪೂಜೆ ಸಲ್ಲಿಸಿದ್ದರು. ಆದರೆ, ಅದೃಷ್ಟ ಅವರ ಬೆನ್ನತ್ತದಂತಾಗಿದೆ. ಗಂಡ ಜೈಲು ಸೇರಿರುವುದರಿಂದ ಮತ್ತೆ ಕಣ್ಣೀರಿನ ಸ್ಥಿತಿ ಎದುರಾಗಿದೆ.
ಈ ನಡುವೆ ವಿಜಯಲಕ್ಷ್ಮಿ ತಮ್ಮ ಮೊದಲ ಪ್ರತಿಕ್ರಿಯೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಏಕಾಂಗಿಯಾಗಿ ನಿಂತಿರುವ ಫೋಟೋವನ್ನು ಶೇರ್ ಮಾಡಿ, ಅದಕ್ಕೆ ಹಾರ್ಟ್ ಬ್ರೇಕ್ ಇಮೋಜಿ ಹಾಕಿದ್ದಾರೆ. ಈ ಪೋಸ್ಟ್ ನೋಡಿ ದರ್ಶನ್ ಅಭಿಮಾನಿಗಳು ಭಾವುಕರಾಗಿ, “ಅತ್ತಿಗೆ ಕುಗ್ಗಬೇಡಿ, ಅಣ್ಣನಿಗೆ ಒಳ್ಳೆಯ ದಿನ ಬರುತ್ತದೆ” ಎಂದು ಧೈರ್ಯ ತುಂಬುತ್ತಿದ್ದಾರೆ.
ಇತ್ತ ಪವಿತ್ರಾ ಗೌಡ ಕೂಡ ಮತ್ತೆ ಜೈಲು ಸೇರಿದ್ದು, ಅವರ ಮಗಳು ಸ್ವಾತಂತ್ರ್ಯ ದಿನದಂದು ಮೊದಲ ಬಾರಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ. “79 ವರ್ಷಗಳ ಸ್ವಾತಂತ್ರ್ಯ ಇದ್ದರೂ ಇನ್ನೂ ಮಹಿಳೆಯರಿಗೆ ಸುರಕ್ಷತೆ, ಸಮಾನತೆ ಸಿಗಿಲ್ಲ” ಎಂದು ತಮ್ಮ ನೋವು ಹಂಚಿಕೊಂಡಿದ್ದಾರೆ.
ದರ್ಶನ್ ಮತ್ತು ಪವಿತ್ರಾ ಗೌಡ ಕುಟುಂಬದ ಭಾವುಕ ಪೋಸ್ಟ್‌ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗಿದೆ.