"28 ವರ್ಷ ಕಟ್ಟಿದ ಬ್ರ್ಯಾಂಡ್ ಕೆಡಿಸಲು ಯಾರಿಗೂ ಸಾಧ್ಯವಿಲ್ಲ – ಡಿ ಫ್ಯಾನ್ಸ್"


ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 28 ವರ್ಷ ಪೂರೈಸಿದ್ದಾರೆ. 1997ರಲ್ಲಿ ಮಹಾಭಾರತ ಚಿತ್ರದ ಮೂಲಕ ತಮ್ಮ ಸಿನಿ ಪ್ರಯಾಣ ಆರಂಭಿಸಿದ ದರ್ಶನ್, ವಿವಿಧ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯದಲ್ಲಿ ‘ಡಿ ಬಾಸ್’ ಆಗಿ ಗುರುತಿಸಿಕೊಂಡಿದ್ದಾರೆ.
ಅಭಿಮಾನಿಗಳ ಅಧಿಕೃತ ‘ಡಿ ಕಂಪನಿ’ ಸಾಮಾಜಿಕ ಜಾಲತಾಣದಲ್ಲಿ, “28 ವರ್ಷಗಳಿಂದ ಕಟ್ಟಿದ ಈ ಬ್ರ್ಯಾಂಡ್ ಯಾರಿಂದಲೂ ಕೆಡವಲು ಸಾಧ್ಯವಿಲ್ಲ” ಎಂದು ಪೋಸ್ಟ್ ಮಾಡಿ ಸಂಭ್ರಮ ಹಂಚಿಕೊಂಡಿದೆ.
ಪ್ರಸ್ತುತ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಆಗಸ್ಟ್ 15ರಂದು ಮೊದಲ ಹಾಡು ಬಿಡುಗಡೆಯಾಗಲಿದೆ. ಆದರೆ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಆದೇಶ ಕಾಯ್ದಿರಿಸಿರುವುದು ಟೆನ್ಷನ್ ಉಂಟುಮಾಡಿದೆ. ಬೇಲ್ ಭವಿಷ್ಯ ಏನಾಗಲಿದೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.