ಡಿಭಾಸ್ ಆಗಮನ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಹರ್ಷಾತಿರೇಕ


ಡಿಭಾಸ್ ಆಗಮನ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಹರ್ಷಾತಿರೇಕ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ನಟ ದರ್ಶನ್ ಆಗಮಿಸಿದ ಕ್ಷಣದಲ್ಲಿ, ಪಟಾಕಿ ಸಿಡಿಸಿ ಜಯಕಾರ ಕೂಗಿದ ಅಭಿಮಾನಿಗಳು ಆತ್ಮೀಯ ಸ್ವಾಗತ ನೀಡಿದರು. ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನು ಪಡೆಯುವುದರ ಮೂಲಕ ಬೆಂಗಳೂರಿಗೆ ಬಂದ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ನಿವಾಸಕ್ಕೆ ಆಗಮಿಸಿದಾಗ, ಸಾವಿರಾರು ಅಭಿಮಾನಿಗಳು ಜಮಾಯಿಸಿ "ಡಿ ಬಾಸ್" ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ, ದರ್ಶನ್ ಹಾಗೂ ಅವರ ಪುತ್ರ ವಿನೀಶ್ ಇಬ್ಬರೂ ಭೇಟಿ ಮಾಡಿದ್ದು, ಮನೆ ಎದುರು ಕಿರುಚಾಟ, ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ತಮ್ಮ ಆನಂದವನ್ನು ಹಂಚಿಕೊಂಡರು. ದರ್ಶನ್ ಆಗಮನದಿಂದ ಸ್ಥಳದಲ್ಲಿ ಜಮಾಯಿಸಿದ ಜನಸಾಗರವನ್ನು ನಿಯಂತ್ರಿಸಲು ಪೊಲೀಸರು ತಕ್ಷಣ ಎಚ್ಚರಿಕೆ ಕೈಗೊಂಡು, ಪರಿಸ್ಥಿತಿಯನ್ನು ನಿಯಂತ್ರಿಸಿದರು.