“ಕಸ್ಟಡಿ”ನಲ್ಲಿ ಭೀಮ ಖ್ಯಾತಿಯ ಪ್ರಿಯಾ ಸೈಬರ್ ಕ್ರೈಮ್ ಕುರಿತ ಹೊಸ ಚಿತ್ರ “ಭೀಮ” ಚಿತ್ರದ ಗಿರಿಜಾ ಪಾತ್ರದ ಮೂಲಕ ಗಮನ ಸೆಳೆದಿರುವ ನಟಿ ಪ್ರಿಯಾ, ಬೃಂದಾವನ್ ಎಂಟರ್‌ಪ್ರೈಸಸ್ ನಿರ್ಮಾಣದ “ಕಸ್ಟಡಿ” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಗೇಶ್ ಕುಮಾರ್ ಯು ಎಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಜೆ.ಜೆ. ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ.
ಸೈಬರ್ ಕ್ರೈಮ್ ಕುರಿತ ಕಥೆಯು ಮೊಬೈಲ್ ಬಳಕೆ ಸುತ್ತ ಸಾಗಿ, ಪ್ರಿಯಾ ಖಡಕ್ ಪೊಲೀಸ್ ಅಧಿಕಾರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರಿನ ಟೊರಿನೊ ಫ್ಯಾಕ್ಟರಿಯಲ್ಲಿ ನಡೆಯುತ್ತಿದ್ದು, ಚಿತ್ರೀಕರಣ ಕೊನೆ ಹಂತ ತಲುಪಿದೆ.
ಪ್ರಿಯ ಜೊತೆ, ಕಾಕ್ರೋಜ್ ಸುಧೀ ಮತ್ತಿತರ ಕಲಾವಿದರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದು, ನಿರ್ದೇಶಕ ಶ್ರೀನಿವಾಸ್ ಕೂಡ ನಟನಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.