Back to Top

2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ ಚಿತ್ರರಂಗ ಮತ್ತು ರಂಗಭೂಮಿಗೆ ವಿಶೇಷ ಗುರುತು

SSTV Profile Logo SStv October 30, 2024
ಚಿತ್ರರಂಗ ಮತ್ತು ರಂಗಭೂಮಿಗೆ ವಿಶೇಷ ಗುರುತು
ಚಿತ್ರರಂಗ ಮತ್ತು ರಂಗಭೂಮಿಗೆ ವಿಶೇಷ ಗುರುತು
2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ ಚಿತ್ರರಂಗ ಮತ್ತು ರಂಗಭೂಮಿಗೆ ವಿಶೇಷ ಗುರುತು ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 69 ಸಾಧಕರನ್ನು ಕರ್ನಾಟಕ ಸರ್ಕಾರ ಗುರುತಿಸಿದೆ. ಚಿತ್ರರಂಗದಿಂದ ಇಬ್ಬರು ಮತ್ತು ರಂಗಭೂಮಿಯಿಂದ ಐವರು ಸಾಧಕರು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಚಿತ್ರರಂಗದಿಂದ ಪ್ರಶಸ್ತಿ ಪಡೆದವರು: 1,.ಹೇಮಾ ಚೌಧರಿ – 1976ರಿಂದ ಕನ್ನಡ ಚಿತ್ರರಂಗದಲ್ಲಿ ನಾಯಕಿ, ತಾಯಿ, ಅಜ್ಜಿ ಪಾತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ ತಮ್ಮ ದೀರ್ಘ ಸೇವೆಯನ್ನು ಗೌರವಿಸಿ ಪ್ರಶಸ್ತಿ ನೀಡಲಾಗಿದೆ. 2.ಎಂಎಸ್ ನರಸಿಂಹಮೂರ್ತಿ – ಹಲವು ಧಾರಾವಾಹಿ ಮತ್ತು ಸಿನಿಮಾಗಳಿಗೆ ಸಾಹಿತ್ಯ, ಸಂಭಾಷಣೆ, ಚಿತ್ರಕತೆ ಒದಗಿಸಿರುವ ಹಿರಿಯ ಸಾಹಿತಿ. ರಂಗಭೂಮಿಯಿಂದ: 1.ಸರಸ್ವತಿ ಜುಲೈಕಾ ಬೇಗಂ 2.ಓಬಳೇಶ್ ಎಚ್​ಬಿ 3.ಭಾಗ್ಯಾ ರವಿ 4.ಡಿ ರಾಮು 5.ಎಚ್ ಜನಾರ್ಧನ 6.ಹನುಮಾನ ದಾಸ ಪವಾರ ಇವರೊಂದಿಗೆ ಸಂಗೀತ, ನೃತ್ಯ, ಯಕ್ಷಗಾನ, ಬಯಲಾಟ ಕ್ಷೇತ್ರಗಳಲ್ಲೂ ಪ್ರಮುಖ ಸಾಧಕರನ್ನು ಗುರುತಿಸಿ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ.